
ಯಶವಂತ ಹಳಬಂಡಿ
Email:
NA
Mobile:
NA
Profession
ಪದವಿಪೂರ್ವ ಶಿಕ್ಷಣ ಹಾಗೂ ಚಿತ್ರಕಲೆ ಹಾಗೂ ವಾಸ್ತುಶಿಲ್ಪದಲ್ಲಿ ತರಬೇತಿ ಹೊಂದಿದ್ದರು. ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕೆಲಸ. ಆಕಾಶವಾಣಿ ಹಾಗೂ ದೂರದರ್ಶನದ ಸುಗಮಸಂಗೀತ ಗಾಯಕರು.
Main Works
ಧಾರವಾಡ ಆಕಾಶವಾಣಿಯಲ್ಲಿ ‘ಬೇಂದ್ರೆ ಕಾವ್ಯವಾಣಿ’ ಕಾರ್ಯಕ್ರಮದ ಮೂಲಕ ಬೇಂದ್ರೆ ಕವನಗಳನ್ನು ಹಾಡಿ ಜನಜನಿತರಾದವರು. 250ಕ್ಕೂ ಹೆಚ್ಚು ಧ್ವನಿಸುರುಳಿಗಳು ಇವರ ಗಾಯನವನ್ನೊಳಗೊಂಡಿವೆ. ನೂರಾರು ಸುಗಮಸಂಗೀತ ಕಮ್ಮಟಗಳನ್ನು ನಡೆಸಿ ಶಿಷ್ಯರನ್ನು ತಯಾರು ಮಾಡಿದ್ದಾರೆ. ಸುಗಮ ಸಂಗೀತದಲ್ಲಿ ಉತ್ತರ ಕರ್ನಾಟಕದ ಶೈಲಿ ಬೆರೆಸಿ ಹಾಡುವ ಗಾಯಕರೆಂದೇ ಪ್ರಸಿದ್ಧಿ ಕರ್ನಾಟಕ ಸರ್ಕಾರ ಯೋಜಿಸುವ ಹಂಪಿ ಉತ್ಸವ, ಕದಂಬೊತ್ಸವ, ಚಾಲುಕ್ಯ ಉತ್ಸವ, ಹೊಯ್ಸಳ ಉತ್ಸವ, ಕರಾವಳಿ ಉತ್ಸವದಂತಹ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಸಂಗೀತ ನಿರ್ದೇಶಕರಾಗಿ ಹಾಗೂ ಗಾಯಕರಾಗಿ ಮನಗೆದ್ದಿದ್ದರು.
Recognition and Accoldaes
ಕರ್ನಾಟಕ ಕಲಾಶ್ರೀ
ರಾಜ್ಯ ಪ್ರಶಸ್ತಿ
ಆರ್ಯಭಟ ಪ್ರಶಸ್ತಿ ಪುರಸ್ಕೃತರು
ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರು
Other important aspetcs
ಸುಗಮ ಸಂಗೀತ, ಚಲನಚಿತ್ರ ಹಿನ್ನಲೆ ಗಾಯನದಲ್ಲಿ ತಮ್ಮದೇ ವಿಶಿಷ್ ಟ ಧ್ವನಿಯಿಂದ ಪ್ರಸಿದ್ಧರಾಗಿರುವ ಪಂಚಮ್ ಹಳಬಂಡಿ ಇವರ ಪುತ್ರರು.
Famous Songs
ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ
ಹೋಗು ಮನಸೆ ಹೋಗು ನಲ್ಲೆ ಇರುವಲ್ಲಿ ಹೋಗು
ಬಾರೋ ಸಾಧನಕೇರಿಗೆ
ಎಲ್ಲೋ ಜೋಗಪ್ಪ ನಿನ್ನರಮಾನೆ
ಸಗ್ಗಾದ ಸಿರಿ ಬಂತೋ ನಮ್ಮೂರಿಗೆ
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಕುಂಬಾರಕಿ ಈಕಿ ಕುಂಬಾರಕಿ
ಆವು ಈವಿನ ನಾವು ನೀವಿಗೆ ಆನು ತಾನಾದ ತನನ – ನಾಕುತಂತಿ
ನಗುನಗುತ ಹಗುರವಾಗು ಓ ಮನವೆ
ರಸ ಸಾಗರದಲಿ ತಾವರೆ ಅರಳಿದೆ ಪ್ರೀತಿ ಅದರ ಹೆಸರು
ಕನಸ ಜರಿಯಬೇಡ ಅಣ್ನಾ ಕನಸ ತೊರೆಯಬೇಡ
ಮಾತು ಬೆಳ್ಳಿ ಮೌನ ಚಿನ್ನ ಎಂದರೀಗ ತಿಳಿಯಿತು
ಹಣ್ಣು ಬಿತ್ತು ಇಂದ್ರವನದ ಹಣ್ಣ ಬಿತ್ತು
Note: Content mentioned here is subject and limited to availability and our reach. This is not an exhaustive biographical representation of the artiste mentioned here.

