top of page

ಎಸ್. ಕೆ. ವಸುಮತಿ

Email:
NA
Mobile:
NA

Profession

ಆಕಾಶವಾಣಿ ಕಲಾವಿದರು – ಗಾಯಕಿ ಮತ್ತು ಸಂಗೀತ ಸಂಯೋಜಕಿ

Main Works

ಆಕಾಶವಾಣಿಯಲ್ಲಿ ಗಾಯನ ಕಲಾವಿದೆಯಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ.


ಸುಮಾರು 300ಕ್ಕೂ ಹೆಚ್ಚು ಗೀತೆಗಳಿಗೆ ರಾಗ ಸಂಯೋಜನೆ ಮಾಡಿರುವ ಕೀರ್ತಿ. ಕನ್ನಡ ಕವಿಗಳ ಹೊಸ ಕವಿತೆಗಳನ್ನು ‘ನವಸುಮ’ ಹಾಗೂ ‘ತಿಂಗಳ ಗೀತೆ’ ಕಾರ್ಯಕ್ರಮದಡಿ ಪ್ರಸ್ತುತಪಡಿಸಿ ಕಾವ್ಯಲೋಕದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸ್ವತಃ ಕವಿ ಕುವೆಂಪು, ಪುತಿನ, ಡಿವಿಜಿಯವರಿಂದ ಮೆಚ್ಚುಗೆ, ಪ್ರೋತ್ಸಾಹ ಪಡೆದ ಹೆಗ್ಗಳಿಕೆ ಇವರದು. ಎಳೆಯ ಪ್ರತಿಭೆಗಳಿಗೆ ಸಂಗೀತ ಶಿಕ್ಷಣ ನೀಡಿ 500ಕ್ಕೂ ಹೆಚ್ಚು ಸಮರ್ಥ ಶಿಷ್ಯರ ತಂಡ ರೂಪಿಸಿದ   ಕೀರ್ತಿಗೆ ಭಾಜನರಾಗಿದ್ದಾರೆ. ಇವರು ಸಂಗೀತ ಸಂಯೋಜಿಸಿದ ಪ್ರಖ್ಯಾತ ನೃತ್ಯ ರೂಪಕಗಳು: ರಾಗತರಂಗ, ಗೋಕುಲ ನಿರ್ಗಮನ, ಹರಿಣಾಭಿಸರಣ, ಸತ್ಯವಾನ ಸಾವಿತ್ರಿ, ಕೆರೆಗೆ ಹಾರ, ಮುಂತಾದುವು


ಧ್ವನಿಮುದ್ರಿಕೆಗಳು: ಸ್ತುತಿ ಸೌರಭ, ನವಭಾವ, ಮುಂತಾದುವು.

Recognition and Accoldaes

  1. ರಾಜ್ಯ ಪ್ರಶಸ್ತಿ

  2. ಕರ್ನಾಟಕ ಕಲಾಶ್ರೀ

  3. ಅನನ್ಯ ಕಲಾಭಿಜ್ಞ

  4. ಹಂಸಪ್ರಶಸ್ತಿ ಮೊದಲಾದ ಪ್ರಶಸ್ತಿ ಗೌರವಗಳು ಸಂದಿವೆ

Other important aspetcs

Famous Songs

  1. ಆವ ರಾಗವ   ಪಾಡುವೆ

  2. ಮಧುಮಾಸ ಬಂದಿಹುದು ಮಧುಕರಿಗಳೇ ಬನ್ನಿ 

  3. ಕಾವೇರಿಯಂಚಿನಲಿ ಕಲ್ಲುದೇವರು ಮಲಗಿ ಕನಸ ಕಾಂಬುದ ಕಂಡೆ

  4. ದೇವಿ ವೀಣಾವಾಣಿ ನಾದ ಸ್ವರೂಪಣಿ

  5. ಬಾ ಸಖಿ ಬೃಂದಾವನಕೆ ಆನಂದ ನಿಕೇತನಕೆ

  6. ಕಲರವದಲೆ ಅಲೆ ಹಾಲು ಹೊಳೆ

  7. ಬಾ ಗೆಳತಿ ನನ್ನೊಡನೆ ಗಗನದಂಚಿಗೆ

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಎಸ್. ಕೆ. ವಸುಮತಿ

Vasumathi S K

Music Composer, Singer
​
To
16 November 2014
​
Pen Name:
Period:
bottom of page