top of page

ಮಾಲೂರು ಶ್ರೀನಿವಾಸ ತಿರುಮಲೆ ಅಯ್ಯಂಗಾರ್

Email:
NA
Mobile:
NA

Profession

ಭಾರತೀಯ ಸೇವಾ  ಇಂಜಿನಿಯರ್ ಆಗಿದ್ದರು. ನಂತರ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡರು. ಕೇಂದ್ರೀಯ   ವಿದ್ಯಾಲಯದಲ್ಲಿ ಸಂಗೀತ ಶಿಕ್ಷಕರಾಗಿದ್ದರು.

Main Works

ಸಂಗೀತ ಎಂ.ಎ ನಲ್ಲಿ ಪ್ರಥಮ rank ಪಡೆದವರು. ತಮ್ಮದೇ ‘ಸಮನ್ವಯ ಕಲಾ ಕೇಂದ್ರವನ್ನು ಸ್ಥಾಪಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ   ಸಂಗೀತ, ವಾದ್ಯ ಸಂಗೀತ ತರಗತಿಗಳನ್ನು ನಡೆಸುತ್ತಿದ್ದಾರೆ. 250ಕ್ಕೂ ಹೆಚ್ಚಿನ ಆಡಿಯೊ ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ. 160ಕ್ಕೂ ಹೆಚ್ಚಿನ ವಿರಳವಾದ ವಿವಿಧ ದಾಸರ ಪದಗಳನ್ನು ಅನ್ವೇಷಿಸಿ ರಾಗ ಸಂಯೋಜಿಸಿದ್ದಾರೆ. ನೃತ್ಯ ಪ್ರದರ್ಶನಗಳಿಗೆ ಸಂಗೀತ ಸಂಯೋಜನೆ ಇವರ ವೈಶಿಷ್ಟ್ಯ. ಆಕಾಶವಾಣಿಯ ಅನುಮೋದಿತ ಕಲಾವಿದರಾಗಿದ್ದು ಅನೇಕ ಕವಿಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸಮೂಹಗಾಯನ, ಗೀತ ರೂಪಕ, ನಾಟಕಗಳಿಗೆ ಸಂಗೀತ ನೀಡಿದ್ದಾರೆ. ವಿದೇಶಗಳಲ್ಲೂ ಅನೇಕ ಸಂಗೀತ ಶಿಬಿರಗಳನ್ನು ನಡೆಸಿ, ನೂರಾರು ಶಿಷ್ಯರನ್ನು ತಯಾರು ಮಾಡಿರುವ ಹೆಗ್ಗಳಿಕೆ ಇವರದ್ದು.

Recognition and Accoldaes

  1. ಕರ್ನಾಟಕ  ಕಲಾಶ್ರೀ

  2. ಲಯ ಕಲಾ ಪ್ರತಿಭಾಮಣಿ

  3. ಸಂಗೀತ ಕಲಾ ದೀಪ್ತಿ

  4. ಸಂಗೀತ ಕಲಾ ಕುಸುಮ

  5. ಸಂಗೀತ ಗುರುರತ್ನ

  6. ಪ್ರಣವಶ್ರೀ

  7. ಕಲಾಪೋಷಕ

    1. ಗಾನ ಲಯ ಕಲಾಪ್ರವೀಣ ಮುಂತಾದ ಪ್ರಶಸ್ತಿಗಳು, ಬಿರುದುಗಳು ಸಂದಿವೆ

Other important aspetcs

ಇವರ ತಾತ ಕನ್ನಡದ ಖ್ಯಾತ ಸಾಹಿತಿಗಳಾದ ಶ್ರೀ ತಿರುಮಲೆ ತಾತಾಚಾರ್ಯ ಶರ್ಮಾ. ಅಜ್ಜಿ ಟಿ. ರಾಜಮ್ಮ ವೀಣೆ ಶೇಷಣ್ಣ ಅವರ ಶಿಷ್ಯೆಯಾಗಿದ್ದರು. ತಂದೆ ಟಿ. ಶ್ರೀರಂಗಾಚಾರ್ಯರು ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸೇವಕರು ಹಾಗೂ ಸಂಶೋಧಕರು. ತಾಯಿ ಟಿ. ವೈದೇಹಿ ಬೆಂಗಳೂರು ಆಕಾಶವಾಣಿಯಲ್ಲಿ ಗಾಯಕಿ ಹಾಗೂ ಉದ್ಘೋಷಕಿಯಾಗಿದ್ದವರು.

Famous Songs

ಬಾ ನನ್ನವಳೆ ಬಾ 

ಅಕ್ಕ ಕೇಳೆ ನನ್ನವರಿಗೆ ಕನಸೊಂದು ಬಿತ್ತು

ಕೊಂಡಾಡಲಳವೇ ನಿನ್ನಯ ಕೀರ್ತಿ ಭೂಮಂಡದೊಳಗೆ

ಏನು ಪುಣ್ಯವ ಮಾಡಿ ನಾನಿಂದು ನಿನ್ನ ಕಂಡೆ 

ಜಯದೇವಿ ಜಯದೇವಿ ಜಯ ಆದಿಶಕ್ತಿ

ಮಾತು ಮರೆತ ಮೌನದಲ್ಲಿ ತಂತಿಯೊಂದು ಮಿಡಿದಿದೆ

ಅವರೆಕಾಯ್ಬೇಕು ಕಾಲದಿ ಅವರೇಕಾಯ್ಬೇಕು

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ

ಭಜರೆ ಮಾನಸ ರಾಮಂ

ಸಪ್ತಸ್ವರದ ಮಧುರ ಮಿಲನ


Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಮಾಲೂರು ಶ್ರೀನಿವಾಸ ತಿರುಮಲೆ ಅಯ್ಯಂಗಾರ್

Tirumale Srinivas

Music Composer, Singer
To
Chami
Pen Name:
Period:
bottom of page