top of page

ಬಿ ಕೆ ಸುಮಿತ್ರಾ

Email:
NA
Mobile:
NA

Profession

ಚಲನಚಿತ್ರ ಹಿನ್ನಲೆ ಗಾಯಕಿ

Main Works

ಕವಲೆರಡು ಕುಲವೊಂದು ಚಿತ್ರದಿಂದ ಹಿನ್ನಲೆ ಗಾಯಕಿಯಾಗಿ  ಚಿತ್ರರಂಗ ಪ್ರವೇಶಿಸಿ, 40 ವರ್ಷಗಳಿಗೂ ಹೆಚ್ಚು ಕಾಲದ ವೃತ್ತಿ ಜೀವನದಲ್ಲಿ ಜಿ.ಕೆ. ವೆಂಕಟೇಶ್, ವಿಜಯ ಭಾಸ್ಕರ್, ಆರ್ ಸುದರ್ಶನಂ, ಎಂ. ರಂಗಾರಾವ್, ರಾಜನ್ ನಾಗೇಂದ್ರ ಸೇರಿದಂತೆ ಪ್ರಸ್ತುತ ಯುವ ಸಂಗೀತ ನಿರ್ದೇಶಕರೊಡನೆಯೂ ಕೆಲಸ ಮಾಡಿದ್ದಾರೆ, 


ಪ್ರಮುಖ ಚಿತ್ರಗಳು: ಮಹಾತಪಸ್ವಿ, ಸತೀಸುಕನ್ಯಾ, ಚಕ್ರತೀರ್ಥ, ಕರುಳಿನ ಕರೆ, ಎರಡು ಮುಖ,   ಬೃಂದಾವನ, ಉಪಾಸನೆ, ಹಂಸಗೀತೆ, ಮುಂತಾದುವು


ರಾಜ್ಯಾದ್ಯಂತ, ದೇಶಾದ್ಯಂತ, ವಿದೇಶಗಳಲ್ಲೂ ಸಹ ಸಂಗೀತ ಕಾರ್ಯಾಗಾರಗಳನ್ನು ನಡೆಸಿ   ವಿದ್ಯಾರ್ಥಿಗಳಿಗೆ ಸಕ್ರಿಯವಾಗಿ ತರಬೇತಿ ನೀಡುತ್ತಿದ್ದಾರೆ. ತಮ್ಮ ಪತಿ ಸುಧಾಕರ್ ಅವರೊಂದಿಗೆ ತಮ್ಮದೇ ವಾದ್ಯಗೋಷ್ಠಿಯ ತಂಡದೊಂದಿಗೆ ಇಂದಿಗೂ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಆಕಾಶವಾಣಿ, ದೂರದರ್ಶನ ಕಲಾವಿದೆ, ಇವರ ನೂರಾರು ಹಾಡುಗಳ ಧ್ವನಿಮುದ್ರಣ, ವಿಡಿಯೋಗಳು ಇಂದಿಗೂ   ಪ್ರಸಾರಗೊಳ್ಳುತ್ತವೆ. ಭಾವಗೀತೆ, ಭಕ್ತಿಗೀತೆ ಹಾಗೂ ಜನಪದ ಗೀತೆಗಳ ಧ್ವನಿಮುದ್ರಿಕೆಗಳು ಇಂದಿಗೂ ಪ್ರಚಲಿತದಲ್ಲಿವೆ.

Recognition and Accoldaes

  1. ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ ನಾಡೋಜ ಗೌರವ ಮತ್ತು ಗೌರವ ಡಾಕ್ಟರೇಟ್

  2. ಕೆಂಪೇಗೌಡ ಪ್ರಶಸ್ತಿ

  3. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

  4. ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ

  5. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಜಿ ವಿ ಅಯ್ಯರ್ ಪ್ರಶಸ್ತಿ

  6. ಆಳ್ವಾಸ್ ನುಡಿಸಿರಿ ಪ್ರಶಸ್ತಿ

  7. ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರು

  8. ಕನ್ನಡದ ಕೋಗಿಲೆ ಎಂಬ ಬಿರುದಾಂಕಿತರು

Other important aspetcs

ಪಂಡರೀಬಾಯಿಯವರ ಸಹೋದರ ಎಂ.ಪ್ರಭಾಕರ್ ಇವರ ಗುರುಗಳು, ಮಗಳು ಸೌಮ್ಯ ಕನ್ನಡ ತಮಿಳು ತೆಲುಗು ಹಿಂದಿ ಚಲನಚಿತ್ರ ಗಾಯಕಿ. ಮಗ ಸುನೀಲ್ ಚಲನಚಿತ್ರ ನಟ. ಇವರು ಆರಂಭಿಸಿದ ವಾದ್ಯಗೋಷ್ಠಿಯ ಪ್ರಾರಂಭದ ಕಾಲದಲ್ಲಿ ಇಳಯರಾಜ ಗಂಗೈಅಮರನ್ ಸಂಗೀತರಾಜ ತಂಡದ ಸದಸ್ಯರಾಗಿದ್ದರು.

Famous Songs

ಚಿತ್ರಗೀತೆಗಳು: 

  1. ಮಧುರ ಮಧುರವೀ ಮಂಜುಳಗಾನ

  2. ಗಾಂಧೀತಾತನ ಸನ್ನಿಧಿಗೊಂದು

  3. ಓಡಿ ಬಾ ನಾ ಓಡುವೆ ಝೂಟ್

  4. ಅ ಆ ಇ ಈ ಕನ್ನಡದಾ ಅಕ್ಷರಮಾಲೆ

  5. ನಿನ್ನೊಲುಮೆ ನಮಗಿರಲಿ ತಂದೆ

  6. ಸಂಪಿಗೆ ಮರದ ಹಸಿರೆಲೆ ನಡುವೆ

  7. ಧರಣಿ ಮಂಡಲ ಮಧ್ಯದೊಳಗೆ

  8. ವೀಣಾ ನಿನಗೇಕೋ ಈ ಕಂಪನಾ

  9. ಒಂದು ದಿನ ರಾತ್ರಿಯಲಿ ಕಂಡೆ ಕನಸೊಂದು, ಮುಂತಾದುವು


ಭಾವ ಗೀತೆಗಳು: 

  1. ಯಾವ ಮೋಹನ ಮುರಳಿ ಕರೆಯಿತು

  2. ಬೃಂದಾವನಕೆ ಹಾಲನು ಮಾರಲು

  3. ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು

  4. ದೇವ ನಿನ್ನ ಮಾಯಗಂಜಿ ನಡುಗಿ ಬಾಡೆನು

  5. ಇನ್ನು ಯಾಕ ಬರಲಿಲ್ಲವ ಹುಬ್ಬಳ್ಳಿಯಾವ, ಮುಂತಾದುವು


ಭಕ್ತಿಗೀತೆಗಳು: 

  1. ನ್ಯಾಮ ನೀತಿ ಮೂರ್ತಿವೆತ್ತ ಸತ್ಯ ದೈವವೇ

  2. ನೋಡು ನೋಡು ಕಣ್ಣಾರ ನಿಂತಹಳೂ

  3. ಶರಣರ ಕಾಯೇ ಚಾಮುಂಡೇಶ್ವರಿ

  4. ನಂಬಿದೆ ನಿನ್ನಾ ನಾಗಾಭರಣ 

  5. ಇಂದು ಶುಕ್ರವಾರ ಶುಭವ ತರುವ ವಾರ, ಮುಂತಾದುವು


ಜನಪದ ಗೀತೆಗಳು: 

  1. ನಿಂಬೀಯಾ ಬನಾದ ಮೇಗಳ ಚಂದ್ರಮಾ ಚಂಡಾಡಿದ

  2. ಘಲ್ಲು ಘಲ್ಲೆನುತಾ ಗೆಜ್ಜೆ

  3. ಮಾಯದಂತ ಮಳೆ ಬಂತವ್ವಾ

  4. ಮುಂಜಾನೆದ್ದು ಕುಂಬಾರಣ್ಣ

  5. ಯಾವ ದೇಶದಾ ಗಂಡು, ಮುಂತಾದವು

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಬಿ ಕೆ ಸುಮಿತ್ರಾ

Sumithra B K

27 April 1941
To
Pen Name:
Period:
bottom of page