
ಬಿ. ವಿ. ಶ್ರೀನಿವಾಸ್
Email:
NA
Mobile:
NA
Profession
ವಾದ್ಯ ಸಂಗೀತಗಾರರು, ಸಂಗೀತ ಸಂಯೋಜಕರು
Main Works
ಬಾಲ್ಯದಲ್ಲೇ ತಂದೆ ವಿದ್ವಾನ್ ವೆಂಕಟೇಶಮೂರ್ತಿಯವರೊಂದಿಗೆ ಭಜನೆ, ಹರಿಕಥೆ, ದಾಸರಪದಗಳನ್ನು ಹಾಡುತ್ತಿದ್ದರು. ಬಿ.ಕೆ. ಸುಮಿತ್ರಾ ಅವರ ತಂಡದಲ್ಲಿ ಹಾರ್ಮೋನಿಯಂ ವಾದಕರಾಗಿದ್ದರು. ಸಾವಿರಾರು ಧ್ವನಿಸುರುಳಿಗಳಿಗೆ ವಾದ್ಯ ಸಂಗೀತವನ್ನು ಸಂಯೋಜಿಸಿರುವ ಹೆಗ್ಗಳಿಕೆ ಅನೇಕ ದಿಗ್ಗಜ ಗಾಯಕರಿಗೆ ಕೀಬೋರ್ಡ್ ನುಡಿಸಿರುವ ಕಲಾವಿದರು.
ಇವರು ವಾದ್ಯಸಂಯೋಜಿಸಿರುವ ಧ್ವನಿಮುದ್ರಿಕೆಗಳು: ಓಕುಳಿ, ಕಾರಂಜಿ, ನವಿಲುಗರಿ, ಅಪೂರ್ವ, ಪ್ರೇಮ ಪ್ರಣಯ, ಮಾವು ಚಿಗುರು, ಅಪರಂಜಿ, ಮುಂತಾದುವು
ಚಲನಚಿತ್ರ ಸಂಗೀತ ಸಂಯೋಜನೆ – ಬೆರಳ್ಗೆ ಕೊರಳ್
ಬಹಳಷ್ಟು ಸಂಗೀತ ನಿರ್ದೇಶಕರೊಡನೆ, ಗಾಯಕರೊಡನೆ ಕೆಲಸ ಮಾಡಿರುವ ಅನುಭವ, ನೂರಾರು ಭಾವಗೀತೆಗಳ ಕಮ್ಮಟಗಳನ್ನು ಏರ್ಪಡಿಸಿ ಸಾವಿರಾರು ಯುವ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
Recognition and Accoldaes
ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ,
ರಾಜ್ಯೋತ್ಸವ ಪ್ರಶಸ್ತಿ
ಇವರ ಸಂಯೋಜನೆಯ ‘ಅಪರಂಜಿ’ ಸಿ,ಬಿ,ಎಸ್. ಸಂಸ್ಥೆ ಹೊರ ತಂದ ಧ್ವನಿಸುರುಳಿ ‘ಗೋಲ್ಡ್ ಡಿಸ್ಕ್’ ಪುರಸ್ಕಾರ ಪಡೆದಿದೆ.
Other important aspetcs
Famous Songs
ಎಲ್ಲ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ
ಶಿವನು ಭಿಕ್ಷಕೆ ಬಂದ ನೀಡು ಬಾರೆ ತಂಗಿ
ಪರಶಿವನ ಮದುವೇಗೆ ಆಕಾಶ ಚಪ್ಪರ
ನಿಂತಲ್ಲೆ ನೀರು ನಿಲ್ಲುವುದಿಲ್ಲೋ ಹಳ್ಳ ಸಿಕ್ಕಿದ ಕಡೆ ಹರಿವುದಲ್ಲೋ
ಜಲ್ಲೆ ಕಬ್ಬು ವಲ್ಲಿ ವಸ್ತ್ರ ನಿನಗೆ
ಹಕ್ಕಿಯಂತೆ ಹಾರುತಾ ಬಾ ನಾ ಚುಕ್ಕಿಯಂತೆ ಬೆಳಗುತ್ತಾ ಬರುವೆ
ಶ್ರೀ ಶ್ರೀಧರ ಭಕ್ತಿಮಾಲಾ – ಆಲ್ಬಂ
ಕುಬೇರನ ಬಳಿ – ಶ್ರೀ ವೆಂಕಟೇಶ್ವರ ಭಕ್ತಿ ಗೀತೆಗಳು
ಮಾದಯ್ಯ ಮಾತಾಡ್ಯಾನೋ – ಭಕ್ತಿಗೀತೆಗಳು
ಬೃಂದಾವನ – ಶ್ರೀ ರಾಘವೇಂದ್ರ ಭಕ್ತಿಗೀತೆಗಳು
Note: Content mentioned here is subject and limited to availability and our reach. This is not an exhaustive biographical representation of the artiste mentioned here.

