top of page

ಸಿದ್ಧಯ್ಯ ಪುರಾಣಿಕ

Email:
NA
Mobile:
NA

Profession

ತಹಸೀಲ್ದಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ,   ಕರ್ನಾಟಕ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ, ಅಂತಿಮವಾಗಿ ಲೇಬರ್ ಕಮೀಷನರ್ ಆಗಿ   ನಿವೃತ್ತರಾದರು.

Main Works

ಕಾದಂಬರಿ: ತ್ರಿಭುವನಮಲ್ಲ 


ಕವನ ಸಂಕಲನಗಳು: ಜಲಪಾತ, ಕರುಣಾ ಶ್ರಾವಣ, ಮಾನಸ ಸರೋವರ, ಮೊದಲು ಮಾನವನಾಗು, ಕಲ್ಲೋಲ ಮಾಲೆ,   ಚರಗ, ಹಾಲ್ದೆನೆ, ಮರುಳ ಸಿದ್ಧನ ಕಂತೆ, ಆಯ್ದ ಕವನಗಳು


ನಾಟಕ: ರಜತ ರೇಖೆ, ಭಾರತವೀರ, ಆತ್ಮಾರ್ಪಣ, ಭಿನ್ನನೂಪುರು 


ಕಥಾ ಸಂಕಲನಗಳು: ಕಥಾ ಮಂಜರಿ, ತುಷಾರ ಹಾರ 


ಜೀವನ ಚರಿತ್ರೆ: ಬಸವಣ್ಣನವರ ಜೀವನ ಹಾಗೂ ಸಂದೇಶ, ಮಹಾದೇವಿ, ಶರಣ   ಚರಿತಾಮೃತ, ಸಿದ್ದರಾಮ, ಹರ್ಡೇಕರ್ ಮಂಜಪ್ಪ, ಸಿದ್ಧರಾಮ, ಮಿರ್ಜಾಗಾಲಿಬ್,   ಅಲ್ಲಮಪ್ರಭು 


ಶಿಶು ಸಾಹಿತ್ಯ: ತುಪ್ಪಾ ರೊಟ್ಟಿಗೇಗೇಗೇ, ಗಿಲ್ ಗಿಲ್   ಗಿಲಗಚ್ಚಿ, ತಿರುಗಲೆ ತಿರುಗಲೆ ತಿರುಗುಯ್ಯಾಲೆ, ನ್ಯಾಯ ನಿರ್ಣಯ, ಮಕ್ಕಳ ಲೋಕ ಸಂಚಾರ,   ಬಣ್ಣಬಣ್ಣದ ಓಕುಳಿ 


ವಚನಗಳು: ವಚನ ನಂದನ, ವಚನೋದ್ಯಾನ, ವಚನರಾಮ 


ಆತ್ಮವೃತ್ತ: ನನ್ನ ನಿನ್ನೆಗಳೊಡನೆ ಕಣ್ಣುಮುಚ್ಚಾಲೆ

Recognition and Accoldaes

  1. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

  2. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

  3. ಭಾರತೀಯ ಭಾಷಾ ಪರಿಷತ್ತಿನ ಬಿಲ್ವಾರ ಪ್ರಶಸ್ತಿ (ವಚನೋದ್ಯಾನ ಕೃತಿಗೆ)

  4. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್

  5. 1987ರಲ್ಲಿ ಕಲಬುರ್ಗಿಯಲ್ಲಿ ನಡೆದ 58ನೇ ಕನ್ನಡ ಸಾಹಿತ್ಯ ಸಮ್ಮೇಳನದ   ಅಧ್ಯಕ್ಷರಾಗಿದ್ದರು

Other important aspetcs

ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕನ್ನಡ ಸಾಹಿತ್ಯ   ಪರಿಷತ್ತಿನ ಗುಲ್ಬರ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕನ್ನಡ   ನಿಘಂಟು ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಕೇಂದ್ರ-ರಾಜ್ಯ ಸಾಹಿತ್ಯ ಅಕಾಡೆಮಿಗಳ   ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬಸವ ಸಮಿತಿಯ ಅಧ್ಯಕ್ಷರಾಗಿದ್ದವರು. ಕರ್ನಾಟಕ ಜಾನಪದ   ಟ್ರಸ್ಟಿನ ಟ್ರಸ್ಟಿಗಳು, ಕನ್ನಡ ಸಂವರ್ಧಕ ಟ್ರಸ್ಟಿನ ಅಧ್ಯಕ್ಷರು, ಬಿ.ಎಂ. ಶ್ರೀ   ಪ್ರತಿಷ್ಠಾನದ ಕಾರ್ಯ ಸಮಿತಿ, ಡಾ. ಸರೋಜಿನಿ ಮಹಿಷಿ ಸಮಿತಿ ಸದಸ್ಯರು.

Famous Songs

  1. ಹೊತ್ತಿತೋ ಹೊತ್ತಿತು ಕನ್ನಡದ ದೀಪ

  2.  ಏನಾದರೂ ಆಗು.. ಮೊದಲು ಮಾನವನಾಗು

  3. ಪ್ರಕೃತಿಯೇ ಗುರು ಗಗನ ಲಿಂಗವು ಜಗವೇ ಕೂಡಲಸಂಗಮ

  4. ಉರಿಯಲಿಲ್ಲ ಆರಲಿಲ್ಲ ಬಾಳ ಹಣತೆ ಹೇ ಪ್ರಭು

  5. ಸಾರುತಿದೆ ಸೃಷ್ಟಿ – ಹಣ್ಣಿನಲಿ ಬೆಣ್ಣೆಯಲಿ ಕೆನೆಮೊಸರು ಹಾಲಿನಲಿ

  6. ಪೂರ್ವಾಂಗನೆ ಪಶ್ಚಿಮಾಂಗನೆ - ನಾ ಕರಿಯಳೆಂದು ನೀ ಜರೆಯಬೇಡ ಬಿಳಿಗೆಳತಿ ಗರ್ವದಿಂದ

  7. ಋಣ ಸ್ಮರಣ – ಆರಾರ ವಂಚಿಸುತ ಸಾಗಿಸಿಹೆ ಬದುಕನ್ನು

  8. ಅಜ್ಜನ ಕೋಲಿದು ನನ್ನಯ ಕುದುರೆ – ಶಿಶುಗೀತೆ

  9. ಸಾವಿರಾರು ಪುಷ್ಪಜಾತಿ ಗಂಧ ಮಾತ್ರ ಒಂದೇ

  10.  ಹೂವ ತರಲಿಲ್ಲವೆಂದ ನಲ್ಲೆಗೆ ಯಾವ ಉತ್ತರ ಹೇಳಲಿ

  11.  ದುಡಿವ ಕೈಗಳಿಗೆ ನಮೋ ನಮೋ ಕೊಡುವ ಕೈಗಳಿಗೆ ನಮೋ ನಮೋ

  12. ಜಗವೇ ದೇಗುಲ ಜೀವಾ ದೇವನು ಜೀವನವೇ ಆರಾಧನೆ

  13. ಹುಬ್ಬು ಹಾರಿಸುತಿಹುದು ಮಿಂಚಿನಲಿ ಮೋಡ

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಸಿದ್ಧಯ್ಯ ಪುರಾಣಿಕ

Siddhaiah Puranick

Poet
18 June 1918
To
5 September 1995
Kavyaananda
Pen Name:
Period:
bottom of page