
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ
Email:
NA
Mobile:
NA
Profession
ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗ ಿ ನೇಮಕಗೊಂಡು 30 ವರ್ಷ ಕಾರ್ಯ ನಿರ್ವಹಿಸಿದರು. ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿ, ನಂತರ ಗೌರವ ಕನ್ನಡ ಪ್ರಾಧ್ಯಾಪಕರಾಗಿ, ಆನಂತರ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತರಾದ ಮೇಲೆ ಧಾರವಾಡದ ಆರ್ಟ್ಸ್ ಕಾಲೇಜಿನ ಪ್ರಿನ್ಸಿಪಾಲರಾಗಿ ನೇಮಕಗೊಂಡಿದ್ದರು.
Main Works
ಕವನ ಸಂಕಲನಗಳು : ಇಂಗ್ಲೀಷ್ ಗೀತಗಳು, ಹೊಂಗನಸುಗಳು
ನಾಟಕ : ಗದಾಯುದ್ಧನಾಟಕಂ, ಅಶ್ವತ್ಥಾಮನ್, ಪಾರಸಿಕರು
ಸಂಪಾದಿತ ಕೃತಿ : ಕನ್ನಡ ಬಾವುಟ
ಕನ್ನಡ ಸಾಹಿತ್ಯ : ಕ ನ್ನಡ ಛಂದಸ್ಸಿನ ಚರಿತ್ರೆ, ಕನ್ನಡ ಸಾಹಿತ್ಯ ಚರಿತ್ರೆ (ಕನ್ನಡ ಕೈಪಿಡಿ ಭಾಗ-1), ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ (ಕನ್ನಡ ಕೈಪಿಡಿ ಭಾಗ-1)
ಇತರ ಕೃತಿಗಳು : ಇಸ್ಲಾಂ ಸಾಹಿತ್ಯ, ಶ್ರೀ ಸಾಹಿತ್ಯ. A Hand Book of Rhetoric
Recognition and Accoldaes
ಶ್ರೀಯವರ ಅವಿಸ್ಮರಣೀಯ ಕೆಲಸಕ್ಕಾಗಿ ೧೯೩೮ರಲ್ಲಿ ಮೈಸೂರಿನ ಮಹಾರಾಜರು `ರಾಜ ಸೇವಾಸಕ್ತ’ ಎಂಬ ಬಿರುದನ್ನು ನೀಡಿ ಗೌರವಿಸಿದರು
೧೯೨೮ರಲ್ಲಿ ಗುಲಬರ್ಗಾದಲ್ಲಿ ನಡೆದ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು
Other important aspetcs
ಬಿ. ಎಂ. ಶ್ರೀ. ಅವರನ್ನು ‘ಕನ್ನಡದ ಕಣ್ವ’ ಎಂದು ಕರೆಯಲಾಗುತ್ತದೆ. ‘ಸಂಭಾವನೆ” ಎಂಬುದು ಇವರ ಅಭಿನಂದನ ಗ್ರಂಥ.
Famous Songs
ಕರುಣಾಳು ಬಾ ಬೆಳಕೆ – (ನ್ಯೂಮನ್ ಕವಿಯ ‘Lead Kindly Light” ಎಂಬ ಕವಿತೆಯ ಕನ್ನಡ ಅನುವಾದ
ಏರಿಸಿ ಹಾರಿಸಿ ಕನ್ನಡದ ಬಾವುಟ
ಮೊದಲ ತಾಯ ಹಾಲ ಕುಡಿದು
ವಸಂತ ಬಂದ ಋತುಗಳ ರಾಜ ತಾ ಬಂದ
ಚಿಮ್ಮುತ ನಿರಿಯನು ಬನದಲಿ ಬಂದಳು ಬಿಂಕದ ಸಿಂಗಾರಿ
ನನ್ನ ಪ್ರೇಮದ ಹುಡುಗಿ ತಾವರೆಯ ಹೊಸಕೆಂಪು
Note: Content mentioned here is subject and limited to availability and our reach. This is not an exhaustive biographical representation of the artiste mentioned here.

