
ರತ್ನಮಾಲಾ ಪ್ರಕಾಶ್
Email:
NA
Mobile:
NA
Profession
ಸುಗಮ ಸಂಗೀತ ಹಾಗೂ ಚಲನಚಿತ್ರ ಹಿನ್ನಲೆ ಗಾಯಕಿ
Main Works
ಕವಿ ಕೆ. ಎಸ್. ನರಸಿಂಹಸ್ವಾಮಿ ಅವರಿಂದ “ಕರ್ನಾಟಕ ಪರ್ವೀನ್ ಸುಲ್ತಾನಾ’ ಎಂದು ಮೆಚ್ಚುಗೆ ಗಳಿಸಿದವರು. ಕನ್ನಡದ ಎಲ್ಲಾ ತಲೆಮಾರಿನ ಕವಿಗಳ ರಚನೆಯನ್ನು ಹಾಡಿರುವ ಗಾಯಕಿ. ಆಕಾಶವಾಣಿ ದೂರದರ್ಶನಗಳ ಉನ್ನತ ದರ್ಜೆಯ ಕಲಾವಿದರೆಂದು ಪರಿಗಣಿತರಾದರು. ಮೈಸೂರು ಅನಂತಸ್ವಾಮಿ ಅವರ ಮೂಲಕ ಎಂ.ಎಸ್.ಐ.ಎಲ್ ಧ್ವನಿಸುರುಳಿಗಳ ಹಾಡುಗಾರ್ತಿಯಾಗಿ ಪ್ರಸಿದ್ಧಿ ಪಡೆದರು. ಸುಗಮ ಸಂಗೀತದ ದಿಗ್ಗಜರುಗಳಾದ ಮೈಸೂರು ಅನಂತಸ್ವಾಮಿ, ಸಿ. ಅಶ್ವತ್ಥ್, ಪದ್ಮಚರಣ್, ಎಚ್.ಕೆ. ನಾರಾಯಣ, ಎಚ್. ಆರ್. ಲೀಲಾವತಿ ಮುಂತಾದವರ ನಿರ್ದೇಶನದಲ್ಲಿ ರತ್ನಮಾಲಾ ಅಸಂಖ್ಯಾತ ಹಾಡುಗಳನ್ನು ಹಾಡಿದ್ದಾರೆ. ಈವರೆಗೆ ಸುಮಾರು 500ಕ್ಕೂ ಹೆಚ್ಚು ಧ್ವನಿಸುರುಳಿಗಳಿಗೆ ಹಾಡಿದ್ದಾರೆ. ಪ್ರಮುಖ ಧ್ವನಿಮುದ್ರಿಕೆಗಳು: ನಿತ್ಯೋತ್ಸವ, ನವೋದಯ, ಕೆಂಗುಲಾಬಿ, ಮೈಸೂರು ಮಲ್ಲಿಗೆ, ಭಾವಸಂಗಮ, ಅನುರಾಗ, ಮಂಕುತಿಮ್ಮನ ಕಗ್ಗ, ಚೈತ್ರ, ರೂಪಸಿ, ಭಾವೋತ್ಸವ, ಕವಿತಾ, ಸ್ಪಂದನ, ನೆನಪಿನಾಳದಲ್ಲಿ, ನೀಲಾಂಬರಿ, ಅಣಿಮುತ್ತುಗಳು, ಭಾವರತ್ನ, ಮುಂತಾದುವು. ಚಲನಚಿತ್ರ ನಿರ್ದೇಶಕರಾದ ಟಿ.ಜಿ. ಲಿಂಗಪ್ಪ, ಹಂಸಲೇಖ, ರಾಜನ್ ನಾಗೇಂದ್ರ, ವಿಜಯ ಭಾಸ್ಕರ್, ಅಶ್ವತ್ಥ್-ವೈದಿ ಮುಂತಾದವರ ನಿರ್ದೇಶನದಲ್ಲಿ ಹಲವಾರು ಗೀತೆಗಳನ್ನು ಹಾಡಿದ್ದಾರೆ. ಪ್ರಮುಖ ಚಲನಚಿತ್ರಗಳು: ಗುರಿ, ಒಂದು ಮುತ್ತಿನ ಕಥೆ, ಏಳು ಸುತ್ತಿನ ಕೋಟೆ, ಮೈಸೂರು ಮಲ್ಲಿಗೆ, ಕರಿಮಾಯಿ, ಕೆಂಡದ ಮಳೆ, ಇತ್ಯಾದಿ
Recognition and Accoldaes
ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗಂಗೂ ಬಾಯಿ ಹಾನಗಲ್ ಸ್ಮಾರಕ ಪ್ರಶಸ್ತಿ, ದೇಶ ವಿದೇಶಗಳಲ್ಲಿನ ವಿವಿಧ ಸಂಘ ಸಂಸ್ಥೆಗಳ ಪ್ರಶಸ್ತಿಗಳಲ್ಲದೆ, ಸುಗಮ ಸಂಗೀತ ಕ್ಷೇತ್ರದ ಉನ್ನತ ಪ್ರಶಸ್ತಿಯಾದ ಸಂತ ಶಿಶುನಾಳ ಷರೀಫ ಪ್ರಶಸ್ತಿ ಸಂದಿದೆ. ಸೋವಿಯತ್ ರಷ್ಯಾದಲ್ಲಿ ಭಾರತ ಉತ್ಸವದಲ್ಲಿ ಪಂ. ರವಿಶಂಕರ್ ತಂಡದಲ್ಲಿ ಹಾಡಿದ ಹೆಗ್ಗಳಿಕೆ ಗಳಿಸಿದ್ದಾರೆ.
Other important aspetcs
ತಾತ ಕೃಷ್ಣಶಾಸ್ತ್ರಿಗಳು ಸಂಗೀತ ಮತ್ತು ಹರಿಕಥಾ ವಿದ್ವಾಂಸರು. ತಂದೆ ಸಂಗೀತ ಕಲಾನಿಧಿ ಪದ್ಮಭೂಷಣ ಆರ್.ಕೆ. ಶ್ರೀಕಂಠನ್. ದೊಡ್ಡಪ್ಪಂದಿರು ಆರ್.ಕೆ. ವೆಂಕಟರಾಮಾಶಾಸ್ತ್ರಿ, ಆರ್.ಕೆ. ರಾಮನಾಥನ್, ಆರ್.ಕೆ. ನಾರಾಯಣಸ್ವಾಮಿ, ಅಣ್ಣ ಆರ್. ಎಸ್. ರಮಾಕಾಂತ ಹೀಗೆ ಸಂಗೀತಜ್ಞರ ಪರಂಪರೆಯೇ ಇವರ ಮನೆತನದಲ್ಲಿದೆ. ಪತಿ ಎಂ.ಎಸ್. ಪ್ರಕಾಶ್ ಮಹಾನ್ ಗಮಕಿಯಾಗಿದ್ದರು. ದಾಸ ಪ್ರತಿಷ್ಠಾನದಲ್ಲಿ ಅಪರಿಮಿತ ಸೇವೆ ಸಲ್ಲಿಸಿದವರು.
Famous Songs
ಕರುಣಾಳು ಬಾ ಬೆಳಕೆ
ಬೃಂದಾವನಕೆ ಹಾಲನು ಮಾರಲು
ಯಾರವರು ಯಾರವರು
ಎದೆಯು ಮರಳಿ ತೊಳಲುತಿದೆ
ಯಾವ ಮೋಹನ ಮುರಳಿ ಕರೆಯಿತು
ಎದೆ ತುಂಬಿ ಹಾಡಿದೆನು
ಏನೀ ಮಹಾನಂದವೇ
ಕಾಂತನಿಲ್ಲದ ಮ್ಯಾಲೆ ಕಾಂತವ್ಯಾತಕೆ
ನನ್ನ ಇನಿಯನ ನೆಲೆಯ ಬಲ್ಲೆಯೇನೆ
ರಾಯರು ಬಂದರು ಮಾವನ ಮನೆಗೆ
ಒಂದಿರುಳು ಕನಸಿನಲಿ
ಮೊದಲ ದಿನ ಮೌನ
ನೀನು ಮುಗಿಲು ನಾನು ನೆಲ
ಎಳೆ ಬೆಳದಿಂಗಳು ಮರದಡಿ ಬರೆದಿದೆ ನೆಳಲಿನ ಚಿತ್ತಾರ
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಬೆಣ್ಣೆ ಕದ್ದ ನಮ್ಮ ಕೃಷ್ಣ
ಜೋಗದ ಸಿರಿ ಬೆಳಕಿನಲ್ಲಿ
ಈ ಹೃದಯವ ನಿನಗೆ ನೀಡಿದೆ ಒಲವೊಂದೆ ನಿನ್ನಿಂದ ಬಯಸಿದೆ
ತಂಗಾಳಿಯಂತೆ ಬಾಳಲ್ಲಿ ಬಂದೆ (ಚಲನಚಿತ್ರ – ಗುರಿ)
ಮುತ್ತೊಂದ ತಂದೆ ಕಡಲಾಳದಿಂದ (ಚಲನಚಿತ್ರ – ಒಂದು ಮುತ್ತಿನ ಕಥೆ)
ಸಂತಸ ಅರಳುವ ಸಮಯ (ಚಲನಚಿತ್ರ – ಏಳು ಸುತ್ತಿನ ಕೋಟೆ)
Note: Content mentioned here is subject and limited to availability and our reach. This is not an exhaustive biographical representation of the artiste mentioned here.

