top of page

ಸತ್ಯಪ್ರಕಾಶ್

Email:
NA
Mobile:
NA

Profession

ಗಾಯಕರು, ನಟರು ಹಾಗೂ ಸಂಗೀತ ಸಂಯೋಜಕರು

Main Works

ತಂದೆ: ಸುಗಮ ಸಂಗೀತ ಕ್ಷೇತ್ರದ ಪ್ರಖ್ಯಾತ ಗಾಯಕರು, ಸಂಯೋಜಕರಾದ ಶ್ರೀ ಮೈಸೂರು ಅನಂತಸ್ವಾಮಿ. ತಂದೆಯ ಕಚೇರಿಗೆ ತಮ್ಮ 9ನೇ ವಯಸ್ಸಿಗೆ ತಬಲಾ ನುಡಿಸಿದ್ದು ನಂತರ ಹಾರ್ಮೋನಿಯಂ ಹಿಡಿದು ಗಾಯನದಲ್ಲೂ ಜೊತೆಯಾದವರು.


ತಂದೆಯವರ ಒಂದು ಧ್ವನಿಯ ಛಾಯೆಯಾಗಿ ಮಾತ್ರವೇ ಉಳಿಯದೇ, ತಮ್ಮದೇ ಆದ ವೈಶಿಷ್ಟ್ಯತೆಗಳಿಂದ   ಸುಗಮ ಸಂಗೀತ ಕ್ಷೇತ್ರವನ್ನು ಬೆಳೆಸುತ್ತ ಬಂದರು. ಒಂದೆಡೆ ತಂದೆಯವರ ಸಂಯೋಜನೆಯ ವಿಸ್ತಾರ, ಮತ್ತೊಂದೆಡೆ ತಮ್ಮದೇ ಆದ ರಾಗ ಸಂಯೋಜನೆಗಳು, ಎರಡನ್ನೂ ಜೊತೆಜೊತೆಯಾಗಿ ನೀಡುತ್ತಾ   ಅಪಾರವಾದ ಜನ ಮನ್ನಣೆ ಮತ್ತು ಶಿಷ್ಯ ವೃಂದವನ್ನು ಕೆಲವೇ ವರ್ಷಗಳಲ್ಲಿ ಗಳಿಸಿದ್ದರು. 


ಸಂಗೀತ ಶಾಲೆ ‘ಶಾಂತಿನಿಕೇತನ’ದ ಮೂಲಕ ತರಬೇತುಗೊಂಡ ನೂರಾರು ಪ್ರತಿಭೆಗಳು ಇಂದಿಗೂ ಸುಗಮ   ಸಂಗೀತ ಕ್ಷೇತ್ರವನ್ನು ಬೆಳೆಸುತ್ತಿದ್ದಾರೆ.  ಹಂಪಿ ಉತ್ಸವ, ಸಾರ್ಕ್ ಸಮ್ಮೇಳನ, ವಸಂತ ಹಬ್ಬ, ದಸರಾ ಹಬ್ಬ, ಅಂತಾರಾಷ್ಟ್ರೀಯ ವಾಣಿಜ್ಯ ಸಮಾವೇಶಗಳಲ್ಲದೇ ದೂರದರ್ಶನ, ಉದಯ ಟಿವಿ, ಜೀ ಕನ್ನಡ, ಈ ಟಿವಿ ಸೇರಿದಂತೆ ಹಲವು ವಾಹಿನಿಗಳಲ್ಲಿ   ಕಾರ್ಯಕ್ರಮಗಳನ್ನು ನೀಡಿದ್ದರು. 

ಸುಮಾರು 200 ಕ್ಕೂ ಹೆಚ್ಚು ಭಾವಗೀತೆಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಕನ್ನಡದ ಮೊಟ್ಟ ಮೊದಲ ಸಂಗೀತ ರಿಯಾಲಿಟಿ ಶೋ ಝೀ ಸರಿಗಮಪದ ಮೂಲ ಕಲ್ಪನೆಯೇ ರಾಜು ಅವರದ್ದಾಗಿತ್ತು.


ಮ್ಯೂಸಿಕ್ ಆಲ್ಬಮ್ಸ್: ಅನಂತ ನಮನ, ಅನಂತಗಾನ, ವಿರಹ, ಪಂಚಮಿ ಹಬ್ಬ, ಬ್ರಹ್ಮ ನಿಂಗೆ   ಜೋಡಿಸ್ತೀನಿ, ಭಾಗ್ಯಾದ ಬಳೆಗಾರ, ಚಿನ್ನದ ಬಳೆಗಾರ, ಚಿರಂತನ, ಭಾವಲಹರಿ, ಕಲಿಸು ಗುರುವೆ,   ಅರ್ಪಿತ, ಕುರುವಂಜಿ, ಬೆಳದಿಂಗಳು, ಸುಳಿಸುಳಿವ ಗಾಳಿ, ಬೇರೆ ಮಧುವೇಕೆ, ಆ ಸಂಜೆ,   ಮುಂತಾದುವು


ನಟನೆ - ಚಲನಚಿತ್ರಗಳು – ಅಭಿ, ಚಿಗುರಿದ ಕನಸು, ಜ್ಯಾಕ್ ಪಾಟ್, ಕಲಾಸಿಪಾಳ್ಯ, ಅಮೃತಧಾರೆ, ಊ ಲಾ ಲಾ, ಅಬ್ಬಬ್ಬಾ ಎಂಥಾ ಹುಡುಗ, ಕಾಂಚನ ಗಂಗಾ, ತುಂಟ, ಮಠ


ಗೀತ ಸಂಯೋಜನೆ: ಕಿರುತೆರೆ - ರಜಿನಿ, ಡಂಡಂ ಡಿಗಾಡಿಗಾ, ಎಲ್ಲೋ ಜೋಗಪ್ಪ ನಿನ್ನರಮನೆ, ಮಂಥನ,   ಗೀತದರ್ಶನ, ನೆಲಮುಗಿಲು, ಮುಸ್ಸಂಜೆ ಕಥಾ ಪ್ರಸಂಗ. ಸಿನಿಮಾ - ಘಳಿಗೆ


ರಂಗಗೀತೆ ಸಂಯೋಜನೆ – ಆಲಿ ಬಾಬಾ, ನಾಯಿ ತಿಪ್ಪ

Recognition and Accoldaes

  1. ಆಕಾಶವಾಣಿಯ ಹೈಗ್ರೇಡ್ ಕಲಾವಿದರಾಗಿದ್ದರು

  2. ಕೇವಲ 36 ವರ್ಷದ ಜೀವಿತಾವಧಿಯಲ್ಲಿ ಅಪಾರ ಶಿಷ್ಯರು ಹಾಗೂ ಅಭಿಮಾನಿಗಳನ್ನು ಗಳಿಸಿದ್ದೇ ರಾಜು ಅವರಿಗೆ ಸಂದ ಗೌರವ-ಪುರಸ್ಕಾರ

  3. ಇಂದಿಗೂ ಇವರ ಹೆಸರಿನಲ್ಲಿ ನಾಡು, ದೇಶ, ವಿದೇಶಗಳಲ್ಲಿ ಗಾನೋತ್ಸವಗಳು ನಡೆಯುತ್ತವೆ

    1. ಇವರ ಹೆಸರಿನಲ್ಲಿ ಯುವ ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಲಾಗುತ್ತಿದೆ

Other important aspetcs

Famous Songs

  1. ಬಡವನಾದರೆ ಏನು ಪ್ರಿಯೆ 

  2. ಕಲಿಸು ಗುರುವೆ

  3. ಪ್ರೀತಿ ಕೊಟ್ಟ ರಾಧೆಗೆ

  4. ಹೇಳ್ಕೊಳಾಕ್ಕೊಂದೂರು

  5. ತುಂತುಂತುಂ ತುಂಬಿ ಬಂದಿತ್ತಾ

  6. ನಾನು ಒತ್ತಾರೆ ಎದ್ಬುಟ್ಟು (ರಿಷಿ ಸಿನಿಮಾ)

  7. ಊರ ಕಣ್ಣು (ರಂಗ SSLC ಸಿನಿಮಾ)

  8. ಯಾವ ಮೋಹನ ಮುರಳಿ ಕರೆಯಿತು (ಅಮೆರಿಕಾ ಅಮೆರಿಕಾ – ಸಿನಿಮಾ)

  9. ಲೋಕದ ಕಣ್ಣಿಗೆ ರಾಧೆ

  10. ನಿನ್ನ ಹೆಸರೆ ಹೇಳುವಂತೆ ನೀನು ಒಂದು ಹೂವಿನಂತೆ

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಸತ್ಯಪ್ರಕಾಶ್

Raju Ananthaswamy

Music Composer, Singer
19 April 1973
To
19 January 2009
Pen Name:
Period:
bottom of page