
ಎಸ್. ಜಿ. ರಘುರಾಮ್
Email:
NA
Mobile:
NA
Profession
ಎಲ್.ಎಲ್.ಬಿ ಪದವೀಧರರಾಗಿ ವಕೀಲರಾಗಿದ್ದವರು ಜೊತೆಗೆ ಸುಗಮ ಸಂ ಗೀತ ಕಲಾವಿದರು, ಸುಗಮ ಸಂಗೀತ ಅಕಾಡೆಮಿ ಸ್ಥಾಪಕರು, ರಂಗ ಕಲಾವಿದರು, ಬರಹಗಾರರು. ಆಕಾಶವಾಣಿ - ದೂರದರ್ಶನ ಜಾಹೀರಾತು ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದರು.
Main Works
ಸುಗಮ ಸಂಗೀತ ಕಲಾವಿದರಾಗಿ ರಾಜಸ್ಥಾನದ ಜೈಪುರದಲ್ಲಿ ನಡೆದ ಅಖಿಲ ಭಾರತ ಯುವ ಸಮ್ಮೇಳನದಲ್ಲಿ ಜಾನಪದ ಸಂಗೀತ ತಂಡದ ನಿರ್ದೇಶಕರಾಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಸಂಗೀತ ರೂಪಕಗಳನ್ನು ಬರೆದು ನಿರೂಪಿಸುತ್ತಿದ್ದರು. ಆಕಾಶವಾಣಿ ಆಯೋಜಿಸಿದ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರು. ಆಕಾಶವಾಣಿ ಕೇಂದ್ರಗಳಲ್ಲಿ ಶ್ರೇಣೀಕೃತ ಸಂಗೀತ ಸಂಯೋಜಕರಾಗಿದ್ದರು. ಕರ್ನಾಟಕದ ಎಲ್ಲ ಕೇಂದ್ರಗಳಿಂದ ಪ್ರಸಾರವಾದ 'ಝೇಂಕಾರ' ಕ್ಕೆ ಸಂಗೀತ ಸಂಯೋಜಿಸಿದ್ದರು. ಸುಗಮ ಸಂಗೀತವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಮೈಸೂರಿನಲ್ಲಿ ಸುಗಮ ಸಂಗೀತ ಅಕಾಡೆಮಿ ಎಂಬ ಟ್ರಸ್ಟ್ ಸ್ಥಾಪಿಸಿದರು. ಇದು ಕರ್ನಾಟಕದಲ್ಲೇ ಪ್ರಥಮ. ನಾಟಕ ಕಲಾವಿದರಾಗಿ ಆಕಾಶವಾಣಿಯ ಅನೇಕ ನಾಟಕಗಳಲ್ಲಿ ಪಾತ್ರವಹಿಸಿದ್ದರು. 'ಇಂಡಿಯನ್ ಸಮ್ಮರ್' ಎಂಬ ಇಂಗ್ಲಿಷ್ ಚಲನಚಿತ್ರದಲ್ಲಿ ಮತ್ತು ಆರ್. ಕೆ. ನಾರಾಯಣ್ ಅವರ "ಮಾಲ್ಗುಡಿ ಡೇಸ್" ಸರಣಿಯಲ್ಲಿ ನಟಿಸಿದ್ದರು. ರ್ನಾಟಕ ಸರ್ಕಾರ ನಿರ್ಮಿಸಿದ ಸಾಕ್ಷ್ಯ ಚಿತ್ರಗಳಿಗೆ ಧ್ವನಿ ವಿವರಣೆ ನೀಡಿದ್ದರು. ಬರಹಗಾರರಾಗಿ ತರಂಗ, ಮಲ್ಲಿಗೆ, ಸುಧಾ ಸೇರಿದಂತೆ ಕರ್ನಾಟಕದ ಪ್ರಸಿದ್ಧ ನಿಯತಕಾಲಿಕೆ ಗಳಿಗೆ ಹಾಸ್ಯ ಲೇಖನಗಳನ್ನು ಕೊಡುಗೆ ನೀಡಿದ್ದರು. ಅವರ 'ನಗೆಗಡಲು' ಸಂಕಲನ ಕನ್ನಡ ಹಾಸ್ಯ ಸಾಹಿತ್ಯ ಲೋಕದಲ್ಲೊಂದು ವಿಶಿಷ್ಟ ಕೃತಿ.
Recognition and Accoldaes
ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಯಿಂದ ಸುಗಮ ಸಂಗೀತ ಗಾಯನಕ್ಕೆ ಪ್ರಶಸ್ತಿ.
1997ರಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ.
ಬರೋಡಾ ಕನ್ನಡ ಸಂಘದಿಂದ, ಮೈಸೂರು ಬನುಮಯ್ಯ ಕಾಲೇಜು ಸುವರ್ಣ ಮಹೋತ್ಸವ ಸಮಿತಿಯಿಂದ, ಮೈಸೂರಿನ ವಸುಂಧರ ಪ್ರದರ್ಶನ ಕಲಾ ಕೇಂದ್ರದಿಂದ ಮತ್ತು ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಗೌರವ ಸನ್ಮಾನಗಳು ಸಂದಿವೆ.
Other important aspetcs
ಎಸ್. ಜಿ. ರಘುರಾಮ್ ಹಾಗೂ ಎಚ್. ಆರ್. ಲೀಲಾವತಿ ಜನಪ್ರಿಯ ಸುಗಮಸಂಗೀತ ದಂಪತಿ ಎನಿಸಿದ್ದರು. 1983ರಲ್ಲಿ ಅಮೆರಿಕೆಯ ಟ್ರೆಂಟನ್ ನಗರದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಪ್ರಪ್ರಥಮಬಾರಿಗೆ ಸುಗಮ ಸಂಗೀತ ಗಾಯಕ ರಾಯಭಾರಿಗಳನ್ನಾಗಿ ಇವರನ್ನು ಕರ್ನಾಟಕ ಸರ್ಕಾರ ಕಳುಹಿಸಿತ್ತು.
Famous Songs
ಮೂಡಿ ಬಂದೆ ಅಂದು ನೀನು ಎನ್ನ ಬಾಳ ಬಾನಿನಲ್ಲಿ
ಏಕೆ ಬಂದೆ ಬೆಳಕೆ ನೀನು ನನ್ನ ಇರುಳ ಮನಸಿಗೆ
ನಿನಗಾಗಿ ಹಾಡುವೆನು ನಿನ್ನ ದನಿಯಾಗುವೆನು
ನೋವುಗಳನು ನಾದವಾಗಿ ಮಾಡಿದಂಥ ಹಾಡುಗಳೇ
Note: Content mentioned here is subject and limited to availability and our reach. This is not an exhaustive biographical representation of the artiste mentioned here.

