top of page

ಪ್ರವೀಣ್ ಡಿ ರಾವ್

Email:
NA
Mobile:
NA

Profession

ಸಂಗೀತ ನಿರ್ದೇಶಕರು, ಸಂಯೋಜಕರು, ಸಾಹಿತ್ಯ ರಚನಕಾರರು, ಮೂಲವಾಗಿ ತಬಲಾ ವಾದಕರು. ಬಹುವಾದ್ಯ ವಾದಕರು, ವಾದ್ಯ ಸಂಯೋಜಕರು, ನಟರು

Main Works

ಕನ್ನಡದ ಅನೇಕ ಪ್ರಸಿದ್ಧ ಕವಿ ಗೀತೆಗಳಿಗೆ ಸಂಗೀತ ಸಂಯೋಜಿಸಿರುವ ಸುಪ್ರಸಿದ್ಧ ಸಂಗೀತ ನಿರ್ದೇಶಕರ, ಗಾಯಕರ ಮೂಲ ಗಾನಕ್ಕೆ ಚ್ಯುತಿ ಬರದಂತೆ ಫ್ಯೂಷನ್ ಶೈಲಿಯಲ್ಲಿ, ವಿಭಿನ್ನ ವಾದ್ಯ ಸಂಯೋಜನೆಯಲ್ಲಿ ಸಾವಿರಾರು ಗೀತೆಗಳ ನೂರಾರು ಧ್ವನಿಮುದ್ರಿಕೆಗಳನ್ನು ಹೊರತಂದಿದ್ದಾರೆ.


ಚಲನಚಿತ್ರಗಳು: ಸುಮಂಗಲಿ, ಝೆಡ್, ಸ್ಟಂಬಲ್, ಕನಕಾಂಬರಿ, ಚಿತ್ರವಿಚಿತ್ರ, ದಿಲ್ದಾರ, ಮಂಥನ, ಮನ ಮಂಥನ, ಹೊಂದಿಸಿ ಬರೆಯಿರಿ, ಇತ್ಯಾದಿ


ಧಾರಾವಾಹಿಗಳು: ಸಂಘಟನೆ, ವಸಂತಗಾನ, ನಿಗೂಢ ಜಗತ್ತು, ಚಂದ್ರಬಿಂಬ, ಲಾಲಿ, ಅಂತರಗಂಗೆ, ಸಂಜೆ   ಮಲ್ಲಿಗೆ, ಮುಕ್ತ, ಅರ್ಧ ಸತ್ಯ, ತುಳಸಿ, ಬದುಕು, ಲಕುಮಿ, ಗಾಳಿಪಟ, ಕಲ್ಯಾಣ ರೇಖೆ, ಚಿಟ್ಟೆ   ಹೆಜ್ಜೆ, ಕುಲವಧು, ಲಕ್ಷ್ಮೀಬಾರಮ್ಮ, ಕನ್ನಡತಿ, ಇತ್ಯಾದಿ.


ನೃತ್ಯ ಹಾಗೂ ರಂಗಭೂಮಿ: ಪಂಚತಂತ್ರ, ಕೈಶಿಕಿ, ರಾಮಾಯಣ, ಬಿಂಬ ಪ್ರತಿಬಿಂಬ, ಮೇಘದೂತ,   ಶ್ರೀನಿವಾಸ ಕಲ್ಯಾಣ, ಶಿಲಾಬಾಲಿಕೆ, ಸಿಂಡ್ರೆಲಾ, ಅಂತರ್ಧ್ವನಿ, ಯಾತ್ರಾ, ಮಹಿಷಾಸುರ   ಮರ್ದಿನಿ, ಶ್ರೀಕೃಷ್ಣ ಪಾರಿಜಾತ, ಯಶೋಧರ, ಸ್ನೋವೈಟ್, ನಾಟ್ಯ ಶಾಸ್ತ್ರ, ಮುಂತಾದುವು 


ಅನೇಕ ವಿದೇಶೀ ಸಂಸ್ಥೆಗಳಾದ Midlands Art centre-UK, Chitralekha Dance company-UK, Indira Thiagarajaj-London, Monica-Belgium, Piali Ray-UK, Sampad Yuva-UK, Pampa Dance Academy-USA, ಇವುಗಳ ಅನೇಕ ರಂಗ ರೂಪಕಗಳಿಗೆ ಸಂಗೀತ   ಸಂಯೋಜಿಸಿದ್ದಾರೆ


ಅಭಿನವ ನೃತ್ಯ ಸಂಸ್ಥೆ – ಪ್ರಮುಖ ಸಂಯೋಜನೆಗಳು – ದತ್ತ ಮಹಿಮಾ, ದ್ವಾದಶಾತ್ಮ, ಮಾನಿನಿ,   ಮುಷ್ಠಿ, ತತ್ ಭಾರತಮ್, SPIRIT OF DANCE, ಮುಂತಾದುವು


“ಪ್ರಕೃತಿ’ ಸಂಸ್ಥೆಯನ್ನು ಸ್ಥಾಪಿಸಿ ಕನ್ನಡ ಸಾಹಿತ್ಯ, ಕರ್ನಾಟಕ ಸಂಸ್ಕೃತಿ, ಪರಂಪರೆ, ಕನ್ನಡ ಕಾವ್ಯ-ಗದ್ಯ ಗಳನ್ನು ಗಾನ-ನೃತ್ಯ-ನಾಟಕ ರೂಪದಲ್ಲಿ ಬೆಳಕಿಗೆ ತರುವ ಕಾರ್ಯವನ್ನು ಮಾಡುತ್ತಿದ್ದಾರೆ, 


ನಟನೆ: ಧಾರಾವಾಹಿಗಳು- ಆಸರೆ, ತುಳಸಿ, ಮನ್ವಂತರ, ಮುಕ್ತ, ಯಶೋದ, ಇತ್ಯಾದಿ


ಲಂಡನ್ ಸಾಂಸ್ಕೃತಿಕ ಒಲಂಪಿಯಾಡ್‌ಗೆ ಸಂಗೀತ ಸಂಯೋಜನೆ ಮಾಡಿದ ಕೀರ್ತಿ ಇವರದ್ದು.

Recognition and Accoldaes

  1. ಆರ್ಯಭಟ್ಟ ಪ್ರಶಸ್ತಿ, 

  2. ಸ್ವರಮಂದಾರ ಪ್ರಶಸ್ತಿ

  3. ಜಿ.ವಿ.ಅತ್ರಿ ಪ್ರಶಸ್ತಿ

  4. ಸಿಲಿಕಾನ್ ಜೇಸೀಸ್ ಪ್ರಶಸ್ತಿ

  5. ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ

  6. ಸಂಗೀತ ರತ್ನಾಕರ

  7. ನಾಟ್ಯ ಸಂಗೀತ ಸರಸ್ವತಿ

  8. ಶ್ರೀಕಲಾ ಜ್ಯೋತಿ, ಕಲಾ ಚಕ್ರವರ್ತಿ

    1. ಕಲಾವತಂಸ, ಮುಂತಾದ ಬಿರುದು ಗೌರವಗಳನ್ನು ಪಡೆದುಕೊಂಡಿದ್ದಾರೆ,

Other important aspetcs

Famous Songs

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಪ್ರವೀಣ್ ಡಿ ರಾವ್

Praveen D. Rao

Music Composer, Singer
To
Pen Name:
Period:
bottom of page