top of page

ಎಂ. ಪ್ರಭಾಕರ್

Email:
Na
Mobile:
NA

Profession

ಸಂಗೀತ ವಿದ್ವಾಂಸರು, ಆಕಾಶವಾಣಿ ಕಲಾವಿದರು, ಸುಗಮ ಸಂಗೀತ ಕ್ಷೇತ್ರದ ಗಾಯಕರು ಹಾಗೂ ಸಂಗೀತ   ಸಂಯೋಜಕರು.

Main Works

ಆಕಾಶವಾಣಿಯಲ್ಲಿ ನಿಲಯದ ಕಲಾವಿದರಾಗಿ ಕೀರ್ತನೆಗಳು ಹಾಗೂ ದೇವರನಾಮಗಳನ್ನು ಹಾಡುತ್ತಿದ್ದರು. ನಂತರದ ದಿನಗಳಲ್ಲಿ   ಕನ್ನಡ ಭಾವಗೀತೆಗಳ ಗಾಯಕರಾಗಿ, ರಾಗ ಸಂಯೋಜಕರಾಗಿ ಹೊರಹೊಮ್ಮಿದರು. ಎಚ್‌.ಆರ್. ಲೀಲಾವತಿಯವರೊಂದಿಗೆ ಎನ್‌.ಕೆ. ಕುಲಕರ್ಣಿ ಅವರ ಕವನಗಳನ್ನಾಧರಿಸಿದ ‘ನವತಾರಾ   ಮಂಡಲ’ - ಸಂಗೀತ ರೂಪಕ ಹಾಗೂ ಎಚ್. ಆರ್. ಲೀಲಾವತಿಯವರದೇ ಸಂಗೀತ ನಿರ್ದೇಶನದಲ್ಲಿ  ‘ವರ್ಷ ವೈಭವ’ – ಸಂಗೀತ ರೂಪಕ ಬಹಳ ಜನಮನ್ನಣೆ   ಗಳಿಸಿತ್ತು. ಸಂಗೀತ ಶಿಕ್ಷಕರಾಗಿ ನೂರಾರು ಶಿಷ್ಯರನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರಲ್ಲಿ ಪ್ರಮುಖರು ಬಿ,ಕೆ, ಸುಮಿತ್ರ, ಆರ್. ರಮಾದೇವಿ, ಕಸ್ತೂರಿ ಶಂಕರ್, ಶಿವಮೊಗ್ಗ ಸುಬ್ಬಣ್ಣ, ಮುಂತಾದವರು.

Recognition and Accoldaes

  1. ಸುಗಮಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ಎರಡೂ ಕ್ಷೇತ್ರಗಳಲ್ಲಿ ಅನೇಕ ಪ್ರಶಸ್ತಿಗಳು ಸಂದಿವೆ. 

  2. 1980ರಲ್ಲಿ   ಮೈಸೂರಿನಲ್ಲಿ ದಿವಂಗತ ಡಾ.ಬಿ. ದೇವೇಂದ್ರಪ್ಪನವರು ಇವರಿಗೆ ‘ಗಾಯಕ ರತ್ನ’ ಎಂಬ ಬಿರುದನ್ನು ನೀಡಿ ಆಶೀರ್ವದಿಸಿದ್ದರು.  

  3. 1986ರಲ್ಲಿ ಕರ್ನಾಟಕ ಗಾನಕಲಾ ಪರಿಷತ್ತು ಶಿವಮೊಗ್ಗೆಯಲ್ಲಿ ನಡೆದ ಸಂಗೀತ ವಿದ್ವಾಂಸರ 16ನೇ ಸಮ್ಮೇಳನದಲ್ಲಿ ಗೌರವಿಸಿ ಸನ್ಮಾನಿಸಿದೆ.    

  4. 1988-89ರಲ್ಲಿ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ 

  5. 2001ನೇ ಸಾಲಿನ ಸುಗಮಸಂಗೀತದ ಅತ್ಯುನ್ನತ ಪ್ರಶಸ್ತಿಯಾದ ಸಂತ ಶಿಶುನಾಳ ಶರೀಫ್‌ ಪ್ರಶಸ್ತಿ

  6. ಅನೇಕ ಸ್ಥಳೀಯ ಸಂಘ ಸಂಸ್ಥೆಗಳು ಬಿರುದು ಬಾವಲಿಗಳನ್ನು ನೀಡಿ ಗೌರವಿಸಿವೆ

Other important aspetcs

ಪ್ರಭಾಕರ್ ಅವರ ತಂದೆ ಎಂ. ರಂಗರಾವ್‌ ಸಂಗೀತ, ಸಾಹಿತ್ಯ, ಅಭಿನಯ ಹಾಗೂ ಚಿತ್ರಕಲೆಯಲ್ಲಿ ಅಭಿರುಚಿ   ಉಳ್ಳವರಾಗಿದ್ದರು. ಹಿರಿಯ ಅಣ್ಣ ವಿಮಲಾನಂದದಾಸರು ಪ್ರಖ್ಯಾತ ಕೀರ್ತನಕಾರರು. ಮತ್ತೊಬ್ಬ ಅಣ್ಣ   ಜಗನ್ನಾಥರಾವ್‌ ಹಾರ್ಮೋನಿಯಂ ತಯಾರಕರು. ಇಬ್ಬರು ಸಹೋದರಿಯರಾದ ಪಂಡರಿಬಾಯಿ ಮತ್ತು ಮೈನಾವತಿ  ಚಿತ್ರಲೋಕದ ತಾರೆಯರಾಗಿ ಕಂಗೊಳಿಸಿದವರು.


Photo courtesy: Dr. T. M. Manjunath

Famous Songs

  1. ನೂರು ಸಲ   ಜುಮ್ಮೆನುವುದೀ ಮನ

  2. ನೀ ಬರುವ ದಾರಿಯಲಿ

  3. ಅಧರದಿ ನಸುನಗೆ ಕರದಲಿ ಕೊಳಲು

  4. ಪಡುವಣ ಬಾನಿನ ನೀಲಿಯ ಹಣೆಯಲಿ

  5. ಶುಭನುಡಿಯೆ ಶಕುನದ ಹಕ್ಕಿ 

  6. ಹಾಡು ಹಳೆಯದಾದರೇನು ಭಾವ ನವನವೀನ’

  7. ನಗುನಗುತ ಹಗುರವಾಗು

  8. ಕವಿದ ಕತ್ತಲೆಯಲ್ಲಿ ಕೈಹಿಡಿದು ನಡೆಸಯ್ಯ

  9. ಎಲ್ಲಿಹುದೆನಲೇಕೆ ಜೇನು? 

  10. ನೀ ಪಾನಗೈಯಲು ಬಲ್ಲೆಯಾದರೆ ಜಾಣ ಎಲ್ಲೆಲ್ಲೂ ಇಹುದದು

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಎಂ. ಪ್ರಭಾಕರ್

Prabhakar M

Music Composer, Singer
15 April 1922
To
13 December 1992
Pen Name:
Period:
bottom of page