
ಎ.ವಿ. ಕೃಷ್ಣಮಾಚಾರ್ಯ (ಪದ್ಮಚರಣ್)
Email:
NA
Mobile:
NA
Profession
ಪಿಟೀಲು ವಿದ್ವಾಂಸರು ಮತ್ತು ಸಂಗೀತ ನಿರ್ದೇ ಶಕರು. ಮೈಸೂರು ಹಾಗೂ ಬೆಂಗಳೂರು ಆಕಾಶವಾಣಿ ನಿಲಯದ ಕಲಾವಿದರು.
Main Works
ಪಿಟೀಲು ವಾದಕರಾಗಿ: ದಕ್ಷಿಣಾದಿ ಹಾಗೂ ಉತ್ತರಾದಿ ಸಂಗೀತದ ಹೆಸರಾಂತ ವಿದ್ವಾಂಸರಿಗೆಲ್ಲಾ ಪಕ್ಕವಾದ್ಯ ನುಡಿಸಿದ್ದರು. ನೂರಾರು SOLO ಕಾರ್ಯಕ್ರಮಗಳನ್ನೂ ನೀಡಿದ್ದರು.
ಆಕಾಶವಾಣಿಯಲ್ಲಿ: ಕುವೆಂಪುರವರ ‘ಪ್ರೇಮಕಾಶ್ಮೀರ’ ರೂಪಕ, ಅನೇಕ ಕನ್ನಡ ಭಾವಗೀತೆಗಳಿಗೆ ರಾಗ ಸಂಯೋಜನೆ, ಹಿಂದಿಯ ಖ್ಯಾತಕವಿಗಳಾದ ಜಯಶಂಕರ್ ಪ್ರಸಾದ್, ಮೈಥಿಲೀಶರಣ್ ಗುಪ್ತ, ಮಹಾದೇವಿ ವರ್ಮ, ನಿರಾಲ, ನರೇಂದ್ರಶರ್ಮ ಬಚ್ಚನ್, ಸಿಯಾರಾಮ ಶರಣ್‌ಗುಪ್ತಾ ಮುಂತಾದ ಅನೇಕರ ಕವನಗಳಿಗೆ ರಾಗ ಸಂಯೋಜನೆ, ಮೀರಾ, ಕಬೀರ, ತುಲಸೀದಾಸ್, ರಯದಾಸ್, ನಾನಕ್, ಖಾಲಸ್ ಮುಂತಾದ ಸಂತರ ಗೀತೆಗಳಿಗೆ ರಾಗ ಸಂಯೋಜನೆ, ಜಯದೇವನ ಅಷ್ಟಪದಿಗಳಿಗೆ ರಾಗ ಸಂಯೋಜನೆ.
ಸಂಗೀತ ರೂಪಕಗಳು: ತಾರಾಮಂಡಲ, ನದಿಯ ಮಕ್ಕಳು, ಅಕ್ಕಮಹಾದೇವಿ, ಗೆಲುವಿನ ಗುಡಿ, ಮೋಹನ ಮಂತ್ರ, ‘ಮಲೆನಾಡು’ ಇತ್ಯಾದಿ. ‘ಆತ್ಮಾರ್ಪಣ’ (ಒಪೇರಾ), ‘ತಾನಸೇನ್’ (ಗೀತ ನಾಟಕ). ನದೀಯಾತ್ರೆ (ಕಾರಂತರ ನಾದಮೇಳ), ದೂರದರ್ಶನದಲ್ಲಿ: ಹಲವಾರು ಭಾವಗೀತೆಗಳು, ಗೀತರೂಪಕಗಳು, ಸಾಕ್ಷ್ಯಚಿತ್ರ, ವೃಂದಗಾನಗಳಿಗೆ ಸಂಗೀತ ಸಂಯೋಜನೆ, ಸಾಕ್ಷ್ಯಚಿತ್ರಗಳು: Nector in stone’ ( ಬೇಲೂರು-ಹಳೇಬೀಡು-ಸೋಮನಾಥಪುರ) ‘Cauvery water comes to Bangalore’, `Tungabhadra’, ‘ಕರ್ನಾಟಕ ಬಂದರುಗಳು’, ‘ಕರ್ನಾಟಕ ಹೆದ್ದಾರಿಗಳು’, ‘ನಾಗಾನಂದ’, ‘ನವಲ್ಗುಂದದ ಕಂಬಳಿಗಳು’, ‘ಎಂದರೋಮಹಾನುಭಾವುಲು’, ‘Excavation of Dwaraka’ , ಮುಂತಾದುವು.
ಚಲನಚಿತ್ರಗಳು: ಪಾಪ-ಪುಣ್ಯ ಹಾಗೂ ಮಲೆಯ ಮಕ್ಕಳು
ಧ್ವನಿಮುದ್ರಿಕೆಗಳು: ಆದಿಶಂಕರಾಚಾರ್ಯರ ಸೌಂದರ್ಯಲಹರಿ, ಕನ್ನಡ, ತುಳು, ಕೊಡವ ಭಾಷೆಯ ಭಕ್ತಿಗೀತೆಗಳು, ದಾಸರ ಪದಗಳು, ಭಾವಗೀತೆಗಳು, ಕ್ಷತ್ರಿಯ ಭಾಷೆಯ ಹಾಡುಗಳಿಗೆ ಸಂಗೀತ ಸಂಯೋಜನೆ.
ರಂಗಭೂಮಿ: ರವೀಂದ್ರನಾಥ ಟಾಗೂರರ ‘ಚಿರಕುಮಾರಸಭಾ’ ಸಾಮಾಜಿಕ ರಂಗನಾಟಕ, ಸಂಧ್ಯಾಕಲಾವಿದರು ಪ್ರದರ್ಶಿಸಿದ ‘ಪೌಲಸ್ತ’ ನಾಟಕದ ಸಂಗೀತ, ಮೂರು ಬೆಕ್ಟ್ ನಾಟಕಗಳಿಗೆ ಸಂಗೀತ ನಿರ್ದೇಶನ .
Recognition and Accoldaes
‘ಬೇಲೂರು’ ಸಾಕ್ಷ್ಯಚಿತ್ರಕ್ಕೆ ‘ರಾಷ್ಟ್ರಪ್ರಶಸ್ತಿ’
‘ಸೋಮನಾಥಪುರ’ ಎಂಬ ಸಾಕ್ಷ್ಯಚಿತ್ರಕ್ಕೆ ‘ಅಂತರರಾಷ್ತ್ರೀಯ ಪ್ರಶಸ್ತಿ’ ಸಂದಿತು
ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾತಿಲಕ’ ಎಂಬ ಬಿರುದನ್ನಿತ್ತು ಗೌರವಿಸಿತು
1995ರಲ್ಲಿ ಗಾಯನ ಸಮಾಜ ಇವರನ್ನು ಸಂಗೀತ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ‘ಸಂಗೀತ ಕಲಾರತ್ನ’ ಎಂದು ಕರೆದು ಗೌರವಿಸಿತು
1994ರಲ್ಲಿ ಕಲಾಭಿಮಾನಿಗಳು ಇವರಿಗೆ ‘ಪದ್ಮಪಲ್ಲವ’ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಿ ಗೌರವ ಸೂಚಿಸಿದರು
ಅವರು ಚಲನಚಿತ್ರ ಆಯ್ಕೆಯ ಸಮಿತಿಯ ಸದಸ್ಯರಾಗಿದ್ದರು
Other important aspetcs
Famous Songs
ನವೋದಯದ ಕಿರಣ ಲೀಲೆ
ಹಚ್ಚೇವು ಕನ್ನಡದ ದೀಪ
ನಾವು ಬಂದೇವ ಗೀ ಗೀ ಪದ
ಎಲ್ಲೋ ಹುಡುಕಿದೆ ಇಲ್ಲದ ದೇವರ
ನಾವಿಬ್ಬರೂ ಅಂದು ಹೊಳೆಯ ದಡದಲ್ಲಿ ನಿಂದು
ಉಡುಗಣ ವೇಷ್ಟಿತ ಚಂದ್ರ ಸುಶೋಭಿತ
ಮಧುಮಾಸ ಬಂದಿಹುದು
ಕಾಡಬೇಡವೋ ಶಾಮ
ಮನಮೋಹನ
ನಿನ್ನ ಬಾಂದಳದಂತೆ ನನ್ನ ಮನವಿರಲಿ
ನುಡಿಸು ಕೊಳಲನು ಗೆಳೆಯಾ
ಹೂವು ಹೊರಳುವವು ಸೂರ್ಯನ ಕಡೆಗೆ
ಹೂವನು ಮುಡೀಬೇಕು (ಚಲನಚಿತ್ರ ಗೀತೆ)
ನೀನು ಮುಗಿಲು ನಾನು ನೆಲ
ತೇನವಿನಾ ತೇನವಿನಾ
ಅವತರಿಸು ಬಾ ನಾರಾಯಣ
ನಾನೇ ವೀಣೆ ನೀನೇ ತಂತಿ
Note: Content mentioned here is subject and limited to availability and our reach. This is not an exhaustive biographical representation of the artiste mentioned here.

