
ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್
Email:
NA
Mobile:
NA
Profession
ಗೋರಕ್ಷಕ ಸಮಿತಿಯಲ್ಲಿ ಗುಮಾ ಸ್ತರಾಗಿ, ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ನಂತರ ಅಧೀಕ್ಷಕರಾಗಿಯೂ ಕೆಲಸ ಮಾಡಿದ್ದರು. ಶಾಸನ ಸಭಾ ಕಚೇರಿಯ ಸಂಪಾದಕರೂ ಆಗಿದ್ದರು. ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರರಾಗಿ, ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟು ಸಂಪಾದಕ ವರ್ಗದಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸಿದ್ದರು.
Main Works
ಕವನ ಸಂಕಲನಗಳು: ಹಣತೆ, ಮಾಂದಳಿರು, ಅಹಲ್ಯೆ, ಶಬರಿ, ವಿಕಟಕವಿವಿಜಯ, ಹಂಸದಮಯ೦ತಿ, ಗೋಕುಲ, ಶಾರದ ಯಾಮಿನಿ, ಗಣೇಶ ದರ್ಶನ, ರಸ ಸರಸ್ವತಿ, ಮಲೆ ದೇಗುಲ, ಹೃದಯ ವಿಹಾರಿ, ಇರುಳು ಮೆರುಗು, ಹಳೆಯ ಬೇರು ಹೊಸ ಚಿಗುರು, ಎಂಬತ್ತರ ನಲುಗು, ರಥಸಪ್ತಮಿ, ನಿರೀಕ್ಷೆ, ಹಣತೆಯ ಹಾಡು.
ಮಹಾಕಾವ್ಯ: ಶ್ರೀಹರಿ ಚರಿತೆ
ನಾಟಕ: ಜಾಹ್ನವಿಗೆ ಜೋಡಿ ದೀವಿಗೆ ಮತ್ತು ಇತರ ನಾಟಕಗಳು
ಗೀತನಾಟಕಗಳು / ರೂಪಕಗಳು: ಗೋಕುಲ ನಿರ್ಗಮನ, ಕವಿ, ಅಹಲ್ಯೆ, ಸತ್ಯಾಯನ ಹರಿಶ್ಚಂದ್ರ, ವಿಕಟಕವಿ ವಿಜಯ, ಶಬರಿ, ಹಂಸದಮಯಂತಿ, ಹರಿಣಾಭಿಸರಣ, ದೀಪಲಕ್ಷ್ಮಿ, ಕುಚೇಲ ಕೃಷ್ಣ, ದೋಣಿಯ ಬಿನದ, ಶ್ರೀ ರಮಣ ಪ್ರಭ, ಶ್ರೀರಾಮ ಪಟ್ಟಾಭಿಷೇಕ.
ಸಣ್ಣಕತೆ: ಧ್ವಜರಕ್ಷಣೆ ಮತ್ತು ಇತರ ಕಥೆಗಳು, ರಥಸಪ್ತಮಿ ಮತ್ತು ಇತರ ಕಥೆಗಳು
ಗದ್ಯಚಿತ್ರಗಳು: ರಾಮಾಚಾರಿಯ ನೆನಪು, ಈಚಲು ಮರದ ಕೆಳಗೆ, ಗೋಕುಲಾಷ್ಟಮಿ, ಭೀತಿ ಮೀಮಾಂಸೆ, ಧೇನುಕೋಪಾಖ್ಯಾನ, ಮಸಾಲೆದೋಸೆ, ಯದುಗಿರಿಯ ಗೆಳೆಯರು
ಕಾವ್ಯಮೀಮಾಂಸೆ/ವಿಮರ್ಶೆ: ಕಾವ್ಯ ಕುತೂಹಲ, ರಸಪ್ರಜ್ಞೆ, ದೀಪರೇಖೆ
ಆಯ್ದ ಸಂಗ್ರಹ: ಅತಿಥಿ, ನವಿಲುಗರಿ, ಋತುಗೀತ, ಲಹರಿ, ಆಯ್ದ ಪ್ರಬಂಧಗಳು
ಅನುವಾದಗಳು: ಬದಲಿಸಿದ ತಲೆಗಳು, ಮಹಾಪ್ರಸ್ಥಾನ, ಕನ್ನಡ ಭಗವದ್ಗೀತೆ, ಗಯಟೆಯ ಫೌಸ್ಟ್ ಭಾಗ-1, ನಮ್ಮಾಳ್ವರ್, ಸಿರಿಬಾಯಿನುಡಿ, ಸಮಕಾಲೀನ ಭಾರತೀಯ ಸಾಹಿತ್ಯ.
Recognition and Accoldaes
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
‘ಪದ್ಮಶ್ರೀ’
ಪಂಪಪ್ರಶಸ್ತಿ
ನಾಡೋಜ ಪ್ರಶಸ್ತಿ
ಮೈಸೂರು ವಿಶ್ವವಿದ್ಯಾಲಯದ ಡಿ.ಲಿಟ್
ರಾಜ್ಯೋತ್ಸವ ಪ್ರಶಸ್ತಿ
1981ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ 53ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು
Other important aspetcs
ಹಾಗೆಯೇ ಇವರ "ಗೋಕುಲ ನಿರ್ಗಮನ" ಎಂಬ ಸಂಗೀತ ಪ್ರಧಾನ ನಾಟಕ ಕನ್ನಡದ ಮೇರು ಕೃತಿಗಳ ಸಾಲಿಗೆ ಸೇರುತ್ತದೆ. ಸಂಗೀತದಲ್ಲಿ ಪು.ತಿ.ನ.ರವರು ಹಲವು ಹೊಸ ರಾಗಗಳನ್ನು ಕಂಡುಹಿಡಿದಿದ್ದರು. ವಾಸಂತಿ, ಸಂಜೀವಿನಿ, ಹರಿಣಿ, ಋತುವಿಲಾಸ, ಗಾಂಧಾರದೋಲ, ಋಷಭ ವಿಲಾಸ, ಮುಂತಾದುವು.
Famous Songs
Note: Content mentioned here is subject and limited to availability and our reach. This is not an exhaustive biographical representation of the artiste mentioned here.

