top of page

ವೈ. ಕೆ. ಮುದ್ದುಕೃಷ್ಣ

Email:
NA
Mobile:
NA

Profession

ರಾಜ್ಯ ಅಬಕಾರಿ ಇಲಾಖೆಯಲ್ಲಿ ಡೆಪ್ಯುಟಿ ಕಮಿಷನರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ,   ಬೆಂಗಳೂರು ಮಹಾನಗರ ಆಯುಕ್ತರಾಗಿ, MSIL ನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಗಾಯಕರು, ರಂಗ ಕರ್ಮಿ ಹಾಗೂ ಧ್ವನಿ ಕಲಾವಿದರು.

Main Works

ಯುವರಂಗದ ಸ್ಥಾಪಕ   ಅಧ್ಯಕ್ಷರು

ಧ್ವನಿ – ಸುಗಮ ಸಂಗೀತ ವ್ಯವಸ್ಥಾಪಕ ಟ್ರಸ್ಟಿ

ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಸ್ಥಾಪಕ ಅಧ್ಯಕ್ಷರು

ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಹೋರಾಡಿದವರು, ಕನ್ನಡ ಕಲಿಕಾ ಶಿಬಿರಗಳನ್ನು ಸ್ಥಾಪಿಸಿದ್ದಾರೆ. ಕನ್ನಡ ಭವನದ ರೂವಾರಿಗಳಲ್ಲಿ ಒಬ್ಬರು. ತಮ್ಮ 10ನೇ ವಯಸ್ಸಿನಿಂದಲೇ ರಂಗ ಗೀತೆಗಳನ್ನು ಹಾಡಿ, ನಾಟಕಗಳಲ್ಲಿ ಪಾತ್ರ ವಹಿಸಿದವರು. ಕಾಳಿಂಗರಾವ್, ಬಾಳಪ್ಪ ಹುಕ್ಕೇರಿ, ಅನಂತಸ್ವಾಮಿಯವರ ಹಾಡುಗಾರಿಕೆಗಳಿಂದ ಪ್ರಭಾವಿತರಾಗಿ ಸುಗಮ ಸಂಗೀತಕ್ಕೊಲಿದರು. ಅನೇಕ ಪ್ರಸಿದ್ಧರೊಡಗೂಡಿ ಹಾಡಿದರೂ ತಮ್ಮದೇ ಸ್ವತಂತ್ರ ಶೈಲಿ ರೂಪಿಸಿಕೊಂಡರು. 


ಹಂಪಿ ಉತ್ಸವ, ಕದಂಬೋತ್ಸವ ಮುಂತಾದ ಉತ್ಸವಗಳಲ್ಲದೆ ಅನೇಕ ಪ್ರಖ್ಯಾರ ವೇದಿಕೆಗಳಲ್ಲಿ ಭಾಗಿಯಾಗಿದ್ದಾರೆ. ಹವ್ಯಾಸಿ ರಂಗಭೂಮಿಯ ಕಲಾವಿದರಾಗಿ, ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ   ಮತ್ತು ನಿರ್ದೇಶಿಸಿದ್ದಾರೆ. ಕಿರುತೆರೆಯಲ್ಲೂ ನಟಿಸಿದ್ದಾರೆ. ಅನೇಕ ಧ್ವನಿಸುರುಳಿ ಮತ್ತು ಸಿ.ಡಿ.ಗಳಿಗೆ ಧ್ವನಿಯಾಗಿದ್ದಾರೆ. ಸುಗಮ ಸಂಗೀತಗಾರರನ್ನು ಒಂದುಗೂಡಿಸಿ ದೇಶ ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ   ಇವರ ಪಾತ್ರ ಹಿರಿದು.


ಹಾಡು ಹಿಡಿದ ಜಾಡು – 75ನೇ ವರ್ಷಕ್ಕೆ ಬರೆದಂತಹ ಆತ್ಮಕಥನ

Recognition and Accoldaes

  1. ದಸರಾ ರಾಜ್ಯಪ್ರಶಸ್ತಿ

  2. ಕರ್ನಾಟಕ ನಾಟಕ ಅಕಾಡಮಿ ಪುರಸ್ಕಾರ

  3. ಸರ್‌.ಎಂ.ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ

  4. ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಕಲಾಶ್ರೀ ಪ್ರಶಸ್ತಿ

  5. ಎಸ್.ಕೆ. ಕರೀಂ ಖಾನ್‌ ಪ್ರಶಸ್ತಿ

  6. ರಾಜ್ಯೋತ್ಸವ ಪ್ರಶಸ್ತಿ

  7. ಕೆಂಪೇಗೌಡ ಪ್ರಶಸ್ತಿ

  8. ಪಿ. ಕಾಳಿಂಗರಾವ್ ಪ್ರಶಸ್ತಿ

  9. ಸಂತ ಶಿಶುನಾಳ ಷರೀಫ್ ಪ್ರಶಸ್ತಿ  ಮುಂತಾದ ಅನೇಕ ಗೌರವಗಳು ಸಂದಿವೆ

Other important aspetcs

Famous Songs

  1. ಎಲ್ಲ ದಾರಿಗೊಂದೇ ಗುರಿ ಬಿಡುಗಡೆ

  2. ನಿನ್ನ ನೆನಪಿನ ಹೊನ್ನ ಕನಸಿನ ದಿವ್ಯ ದ್ವಾರವ ತೆರೆಯುವೆ

  3. ತಿಂಗಾಳು ಮುಳುಗಿದವೋ ರಂಗೋಲಿ ಬೆಳಗಿದವೋ

  4. ಚೆಲ್ಲಿದರೂ ಮಲ್ಲಿಗೆಯಾ 

  5.  ಮೂಡಲ್ ಕುಣಿಗಲ್ ಕೆರೆ

  6. ತೆರೆ ಕಿಟಕಿಯ ಬಾಗಿಲ ಬೀಸಿ ಬರಲಿ ಗಾಳಿ

  7. ಆಹಾ ಪ್ರೀತಿ ಅದರ ರೀತಿ ಯಾರು ಬಲ್ಲರು

  8. ನನ್ನ ಗೀತೆ – ನೆಲದ ಅನ್ನವನ್ನುಂಡು ತೇಗೀತೆ

  9. ಆಗಬೇಕು ನಾನು ಒಂದು ಮಣ್ಣುಹುಳ

  10. ಎಲ್ಲಿಯ ನೀತಿ ಎಲ್ಲಿಯ ನೇಮ ವಿವರಿಸಲಾಗದ ಅದ್ಭುತ ಪ್ರೇಮ

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ವೈ. ಕೆ. ಮುದ್ದುಕೃಷ್ಣ

Muddukrishna Y K

Singer
5 June 1947
To
Pen Name:
Period:
bottom of page