top of page

ನೈಲಾಡಿ ಶಿವರಾಮ ಲಕ್ಷ್ಮೀನಾರಾಯಣ ಭಟ್ಟ

Email:
NA
Mobile:
NA

Profession

ಕವಿ, ಪ್ರಾಧ್ಯಾಪಕರು, ಭಾಷಾಂತರಕಾರರು. ಕನ್ನಡ ಅಧ್ಯಯನ   ಕೇಂದ್ರದಲ್ಲಿ ಭಾಷಾಶಾಸ್ತ್ರ ಸಂಶೋಧಕರಾಗಿ ಕಾರ್ಯ ನಿರ್ವಹಿಸಿದ್ದರು.

Main Works

ಕವನ ಸಂಕಲನ: ವೃತ್ತ, ಸುಳಿ, ಕಾವ್ಯ ಪ್ರತಿಮೆ, ನಂದನ   ಕಿಶೋರಿ, ನಿನ್ನೆಗೆ ನನ್ನ ಮಾತು, ದೀಪಿಕಾ, ಬಾರೊ ವಸಂತ, ಚಿತ್ರಕೂಟ, ಹೊಳೆಸಾಲಿನ ಮರ,  ಬೇಲಿಯಾಚೆಯ ಹೂವು, ಅರುಣಗೀತ, ಭಾವ ಸಂಗಮ (ಆಯ್ದ ಭಾವಗೀತೆಗಳ ಸಂಗ್ರಹ), ನಡೆದಿದೆ ಪೂಜಾರತಿ   (ಆಯ್ದ ಭಾವಗೀತೆಗಳ ಸಂಗ್ರಹ).  


ಅನುವಾದ: ಸುನೀತ (ಶೇಕ್ಸಪಿಯರನ ಐವತ್ತು ಸಾನೆಟ್ಟುಗಳು), ಚಿನ್ನದ ಹಕ್ಕಿ ( ಯೇಟ್ಸ್ ಕವಿಯ   ಐವತ್ತು ಕವನಗಳು), ಭಾರತೀಯ ಗ್ರಂಥ ಸಂಪಾದನಾ ಪರಿಚಯ, 


ಗೀತನಾಟಕ: ಊರ್ವಶಿ, 

ಶಿಶುಸಾಹಿತ್ಯ: ಜಗನ್ನಾಥ ವಿಜಯ, ಮುದ್ರಾಮಂಜೂಷ, ಮೃಚ್ಛಕಟಿಕ, ಇಸ್ಪೀಟ್ ರಾಜ್ಯ, ಟ್ವೆಲ್ಫ್ತ್ ನೈಟ್


ವಿಮರ್ಶೆ: ಹೊರಳು ದಾರಿಯಲ್ಲಿ ಕಾವ್ಯ, ವಿವೇಚನ, ಕಾವ್ಯಶೋಧನ


ಸಂಪಾದನೆ: ಶಿಶುನಾಳ ಶರೀಫರ ಗೀತೆಗಳು

Recognition and Accoldaes

  1. ಹೊರಳು ದಾರಿಯಲ್ಲಿ ಕಾವ್ಯ ವಿಮರ್ಶಾ ಕೃತಿಗೆ ಹಾಗೂ  ಯೇಟ್ಸ್, ಶೇಕ್ಸ್ ಪಿಯರ್, ಎಲಿಯಟ್ ಕಾವ್ಯಾನುವಾದಕ್ಕೆ ಮೂರು ಬಾರಿ ಕರ್ನಾಟಕ ಸಾಹಿತ್ಯ  ಆಕಾಡೆಮಿ ಪ್ರಶಸ್ತಿ, 

  2. ಅನಕೃ ಪ್ರಶಸ್ತಿ

  3. ಶಿವರಾಮ ಕಾರಂತ ಪ್ರಶಸ್ತಿ

  4. ಮಾಸ್ತಿ ಪ್ರಶಸ್ತಿ

  5. ವರ್ಧಮಾನ ಪ್ರಶಸ್ತಿ

  6. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

  7. ಕೇಂದ್ರ ಸರ್ಕಾರದ ಎನ್.ಸಿ.ಇ.ಆರ್.ಟಿ.  ಸಂಸ್ಥೆಯ ಬಾಲ ಸಾಹಿತ್ಯ ಪುರಸ್ಕಾರ

  8. ಆರ್ಯಭಟ ಪ್ರಶಸ್ತಿ

Other important aspetcs

ಧ್ವನಿಮುದ್ರಿಕೆಗಳ ಮೂಲಕ ಭಾವಗೀತೆಗಳನ್ನು ಮಾತ್ರವಲ್ಲದೆ,  ‘ಕನ್ನಡ ಸಾಹಿತ್ಯ ಚರಿತ್ರೆಯನ್ನು ಸಹ ಧ್ವನಿಮುದ್ರಿಕೆಗಳ ಮೂಲಕ ಪರಿಚಯ ಮಾಡಿಕೊಟ್ಟಿದ್ದಾರೆ.  ಸಿ.ಡಿ ಯಲ್ಲಿ ಕನ್ನಡ ಭಾಷೆ ಕ್ರಿ.ಶ. 250ರಿಂದ ಇಂದಿನವರೆಗೂ ಹಾದು ಬಂದಿರುವ ವಿಷಯದ ದಿಗ್ದರ್ಶನವಿದೆ.  ಇದರಲ್ಲಿ ಒಂದು ಸಾವಿರ ವರ್ಷಕ್ಕೂ ಹೆಚ್ಚಿನ ಕನ್ನಡ ಸಾಹಿತ್ಯವನ್ನು ನಾಲ್ಕು ಮಜಲುಗಳಲ್ಲಿ ಚಿತ್ರಿಸಲಾಗಿದೆ. ‘ಕವಿರಾಜಮಾರ್ಗ’ದ ಹಿಂದಿದ್ದ ಪೂರ್ವದ ಹಳೆಗನ್ನಡ ಕಾಲ, ಪಂಪ, ರನ್ನ, ಪೊನ್ನರ ಹಳಗನ್ನಡ ಕಾಲ, ವಚನಕಾರರಿಂದ   ಆರಂಭಿಸಿ ಕುಮಾರವ್ಯಾಸ, ಚಾಮರಸ, ಲಕ್ಷ್ಮೀಶ, ಷಡಕ್ಷರಿ, ಮುದ್ದಣ್ಣರ ನಡುಗನ್ನಡ ಕಾಲ, ನಂತರದ   ಹೊಸ ಕನ್ನಡ ಬೆಳವಣಿಗೆಯ ಸವಿಸ್ತಾರ ಚಿತ್ರಣ ಈ ಧ್ವನಿಮುದ್ರಿಕೆಗಳಲ್ಲಿದೆ.

Famous Songs

  1. ನಡೆದಿದೆ ಪೂಜಾರತಿ ವಿಶ್ವದೇಹಿಗೆ

  2. ನನ್ನ ಇನಿಯನ ನೆಲೆಯ ಬಲ್ಲೆಯೇನೇ

  3. ತೊರೆದು ಹೋಗದಿರು ಜೋಗಿ

  4. ಎಲ್ಲಾ ನಿನ್ನ ಲೀಲೆ ತಾಯೀ

  5. ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬ ಪ್ರೀತಿ

  6. ಬಂದೇ ಬರುತಾವ ಕಾಲ

  7. ನಲ್ಲೆ ನಮ್ಮ ಪ್ರೀತಿಗೇಕೆ

  8. ಯಾಕೆ ಕಾಡುತಿದೆ ಸುಮ್ಮನೆ ನನ್ನನು ಯಾವುದು ಈ ರಾಗ

  9. ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ

  10. ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ

  11. ಬಾರೆ ನನ್ನ ದೀಪಿಕಾ

  12. ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ

  13. ಮಲಗು ಮಲಗೆನ್ನ ಮರಿಯೇ ಬಣ್ಣದ ನವಿಲಿನಾ ಗರಿಯೇ

  14. ಸಾವಿರ ಬಗೆಯಲಿ ಸಾಗುತಿದೆ ಸ್ವಾತಂತ್ರ‍್ಯದ ಲಾಸ್ಯ

  15. ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ

  16. ನಿನ್ನ ನೀತಿ ಅದಾವ ದೇವರಿಗೆ

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ನೈಲಾಡಿ ಶಿವರಾಮ ಲಕ್ಷ್ಮೀನಾರಾಯಣ ಭಟ್ಟ

Lakshminarayana Bhatta

Poet
29 October 1936
To
6 March 2021
NSL
Pen Name:
Period:
bottom of page