top of page

ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ

Email:
NA
Mobile:
NA

Profession

ಸಾಹಿತಿಗಳು, ಪತ್ರಕರ್ತರು, ಸಮಾಜ ಸೇವಕರು.

Main Works

ಕಾವ್ಯ ಸಂಕಲನಗಳು: ಮಂಕುತಿಮ್ಮನ ಕಗ್ಗ (ಇದು ೨೦ನೇ ಶತಮಾನದ ಕನ್ನಡ ಸಾಹಿತ್ಯದ   ಅತ್ಯುತ್ತಮ ತಾತ್ವಿಕ ಕಾವ್ಯಗಳಲ್ಲಿ ಒಂದು), ಅಂತಃಪುರಗೀತೆ (ಇದು ಅವರ ಅತ್ಯದ್ಭುತ ಮೇರು ಕೃತಿ), ನಿವೇದನ, ಉಮರನ ಒಸಗೆ, ಶ್ರೀರಾಮ ಪರೀಕ್ಷಣಂ, ಗೀತ ಶಾಕುಂತಲಾ, ಜ್ಞಾಪಕ ಚಿತ್ರಶಾಲೆ,  ಮರುಳ ಮುನಿಯನ ಕಗ್ಗ.


ನಿಬಂಧ: ಜೀವನ ಸೌಂದರ್ಯ ಮತ್ತು ಸಾಹಿತ್ಯ, ಸಾಹಿತ್ಯ ಶಕ್ತಿ, ಸಂಸ್ಕೃತಿ, ಬಾಳಿಗೊಂದು   ನಂಬಿಕೆ, ಜೀವವನಧರ್ಮ ಯೋಗ (ದೈನಂದಿನ ಜೀವನದ ಯೋಗ-ಗೀತೆಯ ಮೇಲೆ ಪ್ರವಚನ ಸಂಗ್ರಹ)


ನಾಟಕ: ವಿದ್ಯಾರಣ್ಯ ವಿಜಯ, ಜಾಕ್ ಕೇಡ್, ಮ್ಯಾಕ್ ಬೆಥ್

(ಅನೇಕ ಇಂಗ್ಲೀಷ್ ಕೃತಿಗಳನ್ನೂ ರಚಿಸಿದ್ದಾರೆ)


ಮಂಕುತಿಮ್ಮನ ಕಗ್ಗ: ಸಂಪೂರ್ಣ 945 ಕಗ್ಗಗಳು – ಇಂದಿಗೂ ಜನಪ್ರಿಯ


ಅಂತಃಪುರ ಗೀತೆಗಳು: ಒಟ್ಟು 59 ಗೀತೆಗಳ ಸಂಕಲನ. ಇದು ಹೊಯ್ಸಳ ಶಿಲ್ಪದ ಶಿಲಾಬಾಲಿಕೆಯರನ್ನು ಕುರಿತು ಬರೆದ ಮೊಟ್ಟಮೊದಲ ಕವನ ಸಂಗ್ರಹ. ಡಿವಿಜಿ ಅವರು ಸಂಗೀತ ಶಾಸ್ತ್ರವನ್ನು ಬಲ್ಲವರಾಗಿದ್ದು ಇಲ್ಲಿನ ಗೀತೆಗಳಿಗೆ ತಕ್ಕ ರಾಗ,ತಾಳಗಳನ್ನು ನಮೂದಿಸಿದ್ದಾರೆ. ( ಶ್ರೀ ಚೆನ್ನಕೇಶವ, ಏನೀ ಮಹಾನಂದವೇ, ನಟನವಾಡಿದಳ್ ತರುಣಿ, ಶೃಂಗಾರಭಾರ, ಅಭಿನವ ಅವತಾರಿಯಾದ,   ಮುಗುದೆಯಾದೆಯಾ ಕನ್ಯೆ, ಏನೇ ಶುಕಭಾಷಿಣಿ…ಮುಂತಾದುವು ಜನಪ್ರಿಯ ಗೀತೆಗಳು)

Recognition and Accoldaes

  1. ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, 

  2. ಕೇಂದ್ರ   ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕೃತಿ-ಜೀವನಧರ್ಮಯೋಗ), 

  3. ಭಾರತ ಸರ್ಕಾರದಿಂದ ಪದ್ಮಭೂಷಣ ಗೌರವ  ಮತ್ತು 

  4. 1932ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೇ ಕನ್ನಡ ಸಾಹಿತ್ಯ ಸಮ್ಮೇಳನದ   ಅಧ್ಯಕ್ಷರಾಗಿದ್ದರು. 

    1. ಭಾರತೀಯ ಅಂಚೆ ಸೇವೆ ಡಿವಿಜಿಯವರ ನೆನಪಿಗಾಗಿ ೧೯೮೮ರಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿತು.

Other important aspetcs

16 ವರ್ಷ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್   ಸದಸ್ಯರಾಗಿದ್ದರು. ಮೈಸೂರು ಪತ್ರಿಕೋದ್ಯಮ ಸಂಘದ ಸ್ಥಾಪನೆ ಮಾಡಿದರು. ಬೆಂಗಳೂರು ಪುರಸಭೆ   ಸದಸ್ಯರು, ರಾಜ್ಯಾಂಗ ಸುಧಾರಣಾ ಸಮಿತಿ ಸದಸ್ಯರು, ಪ್ರಜಾಜನ ಪರಿಷತ್ತು ದೇಶೀಯ ಸಂಸ್ಥಾನಗಳ   ಪರಿಷತ್ತು ಮೊದಲಾದ ಹತ್ತಾರು ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿದ್ದರು. ಇಂಗ್ಲಿಷ್ ಕನ್ನಡ   ನಿಘಂಟಿನ ಸಂಪಾದಕ ಸಮಿತಿಯಲ್ಲಿದ್ದರು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು 1945ರಲ್ಲಿ   ಸ್ಥಾಪಿಸಿದರು. 1933-37ರಲ್ಲಿ ಪರಿಷತ್ತಿನ ಉಪಾಧ್ಯಾಕ್ಷರಾಗಿದ್ದರು.

Famous Songs

  1. ಶ್ರೀ ಚೆನ್ನಕೇಶವ, 

  2. ಏನೀ ಮಹಾನಂದವೇ, 

  3. ನಟನವಾಡಿದಳ್ ತರುಣಿ, 

  4. ಅಭಿನವ ಅವತಾರಿಯಾದ,   

  5. ಮುಗುದೆಯಾದೆಯಾ ಕನ್ಯೆ, 

  6. ಏನೇ ಶುಕಭಾಷಿಣಿ

  7. ಹುಲ್ಲಾಗು ಬೆಟ್ಟದಡಿ

  8. ನಗುವುಸಹಜದ ಧರ್ಮ

  9. ಹೆಸರು ಹೆಸರೆಂದು

  10. ಅಕ್ಕಿಯೊಳಗನ್ನವನು

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ

Gundappa D V

Poet
5 December 1904
To
13 March 1979
DVG
Pen Name:
Period:
bottom of page