
ಗುಡಿಬಂಡೆ ರಾಮಾಚಾರ್
Email:
NA
Mobile:
NA
Profession
ವ್ಯವಸಾಯ ಕ್ಷೇತ್ರದಲ್ಲಿ ಕೃಷಿ ವಿಜ್ಞಾನದ ಪದವಿ. ಗಾಯನ ಕ್ ಷೇತ್ರದಲ್ಲಿ ಅಪಾರ ಕೃಷಿ
Main Works
ರಾಮಾಚಾರ್ಯರು ಊರೂರು ಸುತ್ತಿ ಸ್ವಾತಂತ್ರ್ಯದ ಗೀತೆ, ಲಾವಣಿ, ತತ್ವಪದ ಹಾಡುವುದರ ಜೊತೆಗೆ ಪಿಟೀಲು, ಮ್ಯಾಂಡೊಲಿನ್ ವಾದನಗಳಲ್ಲೂ ಪರಿಣಿತರಾಗಿದ್ದರು. ಸರಕಾರದ ಪ್ರಚಾರ ಇಲಾಖೆ ವತಿಯಿಂದ ಕುಟುಂಬಯೋಜನೆ, ಉಳಿತಾಯ ಯೋಜನೆಗಾಗಿ ಪ್ರಚಾರ ಗೀತೆಗಳನ್ನೂ ಹಾಡಿದರು. ಮನೆಮನೆಯಲ್ಲೂ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಸಂಗೀತ ನಿರ್ದೇಶಕರಾದ ಪಂಕಜ್ ಮಲ್ಲಿಕ್, ಭೂಪೇನ್ ಹಜಾರಿಕಾ ಅವರುಗಳ ಮುಂದೆ ಬಂಗಾಳಿ ಗೀತೆಗಳನ್ನು ಹಾಡಿದ್ದರು. ಬಿಸ್ರಾ ಹೆಸರಿನಲ್ಲಿ ಕೊರವಂಜಿ ಹಾಸ್ಯ ಪತ್ರಿಕೆಗೆ ಅನೇಕ ಅಣಕು ಹಾಡುಗಳನ್ನು ಬರೆಯುತ್ತಿದ್ದರು. ನಾಲ್ಕು ದಶಕಗಳಿಗೂ ಹೆಚ್ಚು ಸುದೀರ್ಘ ಕಾಲ ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನಕ್ಕೆ ಇವರದ್ದೇ ಪ್ರಾರ್ಥನಾ ಗೀತೆ. ವರಕವಿ ಬೇಂದ್ರೆಯವರ ಗಂಗಾವತರಣ, ಹರಿಹರನ ಗುಂಡಯ್ಯನ ರಗಳೆ, ಪು.ತಿ.ನ. ಅವರ ‘ಗೋಕುಲ ನಿರ್ಗಮನ’ ರಾಮಾಚಾರ್ಯರ ಅಚ್ಚುಮೆಚ್ಚಿನ ಗೀತೆಗಳು.
Recognition and Accoldaes
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
2001-02 ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರು
ಕೈವಾರದಲ್ಲಿ ನಡೆದ ಜಿಲ್ಲಾ ಮಟ್ಟದ ಗಮಕ ಸಮ್ಮೇಳನದ ಅಧ್ಯಕ್ಷತೆಯ ಗೌರವ
ಕರ್ನಾಟಕ ಗಾನ ಕಲಾ ಪರಿಷತ್ತಿನ ಸಂಗೀತ ವಿದ್ವಾಂಸರ ಸಮ್ಮೇಳನದ ವಿದ್ವತ್ಗೋಷ್ಠಿಯಲ್ಲಿ ಸನ್ಮಾನ ಸಂದಿದೆ. ಗಮಕ ಕಲಾ ಸೇವೆಗೂ ಅಕಾಡೆಮಿ ಗೌರವ ಪ್ರಾಪ್ತವಾಗಿದೆ
Other important aspetcs
ಒಮ್ಮೆ ರಾಮಾಚಾರ್ಯರು ಬಿಜಾಪುರದ ತೋರವೇ ನರಸಿಂಹನಗುಡಿ, ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನದಲ್ಲಿ “ಇಳಿದುಬಾ ತಾಯೆ….” ಹಾಡಿದಾಗ ಕಾಕತಾಳೀಯವೆಂಬಂತೆ ಮಳೆ ಸುರಿಯಿತು. ಹೀಗಾಗಿ ಅವರಿಗೆ ‘ಋಷ್ಯಶೃಂಗ’ರೆಂಬ ಬಿರುದು ಪ್ರಾಪ್ತವಾಯಿತು.
Famous Songs
ಆಡಿದನಾಡಿದ ನಾದ ಶಂಕರ
ದೋಣಿ ಸಾಗಲಿ ಮುಂದೆ ಹೋಗಲಿ
ಜೀವ ಜಾತ್ರೆಯಲಿ ಪ್ರಾನಪಾತ್ರೆಯಲಿ
ಇಳಿದು ಬಾ ತಾಯೆ ಇಳಿದು ಬಾ
ಎಲ್ಲವಳೆಲ್ಲವಳೆಲ್ಲವಳು
ನಿಲ್ಲಿಸದಿರು ವನಮಾಲಿ ಕೊಳಲಗಾನವ
ಲಘುವಾಗಲೆ ಮನ ಗೆಲುವಾಗಲೆ ಮನ
Note: Content mentioned here is subject and limited to availability and our reach. This is not an exhaustive biographical representation of the artiste mentioned here.

