top of page

ಡಾ. ಮೊಗೇರಿ ಗೋಪಾಲಕೃಷ್ಣ ಅಡಿಗ

Email:
NA
Mobile:
NA

Profession

ಕವಿ, ಕನ್ನಡ ಪ್ರಾಧ್ಯಾಪಕರು, ಬರಹಗಾರರು, ಸಾಕ್ಷಿ ಪತ್ರಿಕೆಯ   ಸಂಪಾದಕರು

Main Works

ಕವನ ಸಂಕಲನಗಳು: ಭಾವತರಂಗ, ಕಟ್ಟುವೆವು ನಾವು, ನಡೆದು   ಬಂದ ದಾರಿ, ಚಂಡೆಮದ್ದಳೆ, ಭೂಮಿಗೀತ, ವರ್ಧಮಾನ, ಇದನ್ನು ಬಯಸಿರಲಿಲ್ಲ, ಮೂಲಕ ಮಹಾಶಯರು, ಬತ್ತಲಾರದ ಗಂಗೆ, ಚಿಂತಾಮಣಿಯಲ್ಲಿ ಕಂಡ ಮುಖ, ಸುವರ್ಣ ಪುತ್ಥಳಿ ಹಾಗೂ ಬಾ ಇತ್ತ ಇತ್ತ.


ಕಾದಂಬರಿಗಳು: ಅನಾಥ, ಆಕಾಶದೀಪ 


ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ  ಹೀಗೆ  ವಿವಿಧ ವಿಷಯಗಳ ಬಗ್ಗೆ ಅನೇಕ   ಲೇಖನಗಳನ್ನು ಬರೆದಿದ್ದಾರೆ. ಈ ಎಲ್ಲ ವೈಚಾರಿಕ ಲೇಖನಗಳೂ ‘ಸಮಗ್ರಗದ್ಯ’ ಎಂಬ ಸಂಪುಟವೊಂದರಲ್ಲಿ ಪ್ರಕಟಗೊಂಡಿದೆ. ಕೆಲವು ಸಣ್ಣಕಥೆಗಳನ್ನೂ ಬರೆದಿದ್ದಾರೆ.

Recognition and Accoldaes

  1. ರಾಜ್ಯ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, 

  2. ‘ವರ್ಧಮಾನ’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, 

  3. ಕೇರಳದ ಪ್ರತಿಷ್ಠಿತ ‘ಕುಮಾರ್ ಸಮ್ಮಾನ್’ ಪ್ರಶಸ್ತಿ, 

  4. ಧರ್ಮಸ್ಥಳದಲ್ಲಿ ನಡೆದ 51ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 

  5. ಸಮಗ್ರ ಕಾವ್ಯಕ್ಕೆ ಮೂಡಬಿದ್ರೆಯ ವರ್ಧಮಾನ ಪ್ರಶಸ್ತಿ, 

  6. ಮಧ್ಯಪ್ರದೇಶ ಸರಕಾರ ಆರಂಭಿಸಿದ ಪ್ರಥಮ ಕಬೀರ್ ಸನ್ಮಾನ್ ಪ್ರಶಸ್ತಿ, 

  7. 1986ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 

  8. 1993ರಲ್ಲಿ ಸುವರ್ಣ ಪುತ್ಥಳಿ ಕೃತಿಗೆ ಮರಣೋತ್ತರ ಪಂಪ ಪ್ರಶಸ್ತಿ.

  9. 1988ರಲ್ಲಿ ಥೈಲ್ಯಾಂಡಿನ ಬ್ಯಾಂಕಾಕ್ ನಗರದಲ್ಲಿ ನಡೆದ ಜಾಗತಿಕ ಕವಿ ಸಮ್ಮೇಳನದಲ್ಲಿ   ವರ್ಲ್ಡ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಸಂಸ್ಥೆಯಿಂದ ಡಾಕ್ಟರೇಟ್ ಆಫ್ ಲಿಟರೇಚರ್   ಪ್ರಶಸ್ತಿ.

  10. “ಶತಮಾನದ ಕವಿ” ಎಂದೇ ಜನಪ್ರಿಯರು.

Other important aspetcs

1971ರಲ್ಲಿ ಲೋಕಸಭಾ ಚುನಾವಣೆಯಲ್ಲಿ 9 ಪಕ್ಷಗಳ ಒಕ್ಕೂಟದ ಪರವಾಗಿ ಬೆಂಗಳೂರಿನಿಂದ ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ದೆಹಲಿಯ ನ್ಯಾಶನಲ್ ಬುಕ್ ಟ್ರಸ್ಟ್ ನಲ್ಲಿ ಉಪನಿರ್ದೇಶಕರಾಗಿ ನಂತರ ಶಿಮ್ಲಾದ ಇಂಡಿಯನ್ ಇನ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡಿಸ್ ಸಂಸ್ಥೆಯಲ್ಲಿ ಮೂರು ವರ್ಷ ವಿಸಿಟಿಂಗ್ ಫೆಲೋ ಆಗಿ ಕೆಲಸ ಮಾಡಿದ್ದರು.

Famous Songs

  1. ಯಾವ ಮೋಹನ ಮುರಳಿ ಕರೆಯಿತು

  2. ಇಂದು ಕೆಂದಾವರೆಯು ನಳನಳಿಸಿ ದಾರಿಯಲಿ

  3. ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ

  4. ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು

  5. ನಿನಗೆ ನೀನೇ ಗೆಳೆಯ ನಿನಗೆ ನೀನೆ

  6. ಹೊಸ ಹಾದಿಯನು ಹಿಡಿದು ನಡೆಯಣ್ಣ ಮುಂದೆ

  7. ಒಡೆದು ಬಿದ್ದ ಕೊಳಲು ನಾನು

  8. ಮೌನ ತಬ್ಬಿತು ನೆಲವ ಪುಳಕಗೊಂಡಿತು ಧಾರಿಣಿ

  9. ಎದೆಯು ಮರಳಿ ತೊಳಲುತಿದೆ 

  10. ಅಮೃತವಾಹಿನಿಯೊಂದು 

  11. ಇವಳೇ ನನ್ನವಳೀ ಹೆಣ್ಣು

    1. ಅಳಿಯಲಾರದ ನೆನಹು

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಡಾ. ಮೊಗೇರಿ ಗೋಪಾಲಕೃಷ್ಣ ಅಡಿಗ

Gopalakrishna Adiga

Poet
18 February 1918
To
14 November 1992
Pen Name:
Period:
bottom of page