
ಹೊಸನಗರ ನಾಗಪ್ಪ ರಾಘವೇಂದ್ರ ರಾವ್
Email:
NA
Mobile:
NA
Profession
ಗಾಯನ, ಗೀತ ರಚನೆ, ಸಂಗೀತ ಸಂಯೋಜನೆ, ವಾದ್ಯ ಸಂಗೀತ, ಪ್ರಸಾದನ
Main Works
ಸುಗಮ ಸಂಗೀತ ಕ್ಷೇತ್ರದಲ್ಲಿ 1000ಕ್ಕೂ ಹೆಚ್ಚು ಭಾವಗೀತೆಗಳಿಗೆ ರಾಗ ಸಂಯೋಜಿಸಿದ್ದಾರೆ. ಭಾರತ ಸರಕಾರದ ಸಂಗೀತ ನಾಟಕ ಅಕಾಡೆಮಿಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ. ರಾಜ್ಯ ಸರ್ಕಾರದ ವಾರ್ತಾ ಇಲಾಖೆ, ಕುಟುಂಬ ಕಲ್ಯಾಣ, ವಯಸ್ಕರ ಶಿಕ್ಷಣ, ನೀರಾವರಿ ಮುಂತಾದ ಇಲಾಖಾ ಪ್ರಚಾರ ಕಾರ್ಯಗಳಲ್ಲಿ ಹಾಡುಗಾರರಾಗಿ 20 ವರ್ಷಗಳ ಸತತ ಸೇವೆ ಸಲ್ಲಿಸಿದ್ದಾರೆ. ಅದರ ಜೊತೆ ಅಂದಿನ ಪ್ರಧಾನ ಮಂತ್ರಿಗಳಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರ 20 ಅಂಶಗಳ ಕಾರ್ಯಕ್ರಮಗಳೆಲ್ಲವನ್ನೂ ಸೇರಿಸಿ ತಾವೇ ಗೀತೆಯನ್ನು ರಚಿಸಿ ಎಲ್ಲಾ ಕಡೆಯಲ್ಲಿಯೂ ತಮ್ಮ ಹಾಡಿನ ಮೂಲಕ ಪ್ರಚಾರ ಮಾಡಿದ್ದಾರೆ.
ಧ್ವನಿಮುದ್ರಿಕೆಗಳು: ಅಮ್ಮ ಎಂಬ ಮಾತಿಗಿಂತ, ಅಭಿನಂದನ, ನಗು ಮಗು ನಗು, ಆಲಾಪ . “ಎಂದಾದರೊಂದು ದಿನ’ – ರಾಘಣ್ಣನವರ ಸಮಗ್ರ ಗೀತೆಗಳ ಸಾಂದ್ರಿಕೆ
ಕಾಡು ಕಣಿವೆಯ ಹಾಡುಹಕ್ಕಿ ಹಾಗೂ ಸ್ವರಸಾರಥಿ – ರಾಘಣ್ಣನವರಿಗೆ ಸಂದಿರುವ ಅಭಿನಂದನಾ ಗ್ರಂಥ
Recognition and Accoldaes
ಹೊಸನಗರದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನದ ಗೌರವವನ್ನು ನೀಡಲಾಗಿತ್ತು
ಕರ್ನಾಟಕ ಸರಕಾರದ ಸಂತ ಶಿಶುನಾಳ ಷರೀಫ ಪ್ರಶಸ್ತಿ
ರಾಜ್ಯೋತ್ಸವ ಪ್ರಶಸ್ತಿ
ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ ಪುರಸ್ಕಾರ
ಅನನ್ಯ ಸಂಸ್ಥೆಯ ಅನನ್ಯ ಕಲಾಭಿಜ್ಞ ಪುರಸ್ಕಾರ
ಆರ್ಯಭಟ, ಭಾರ್ಗವ, ರಾಗಶ್ರೀ, ಸ್ವರ ಸಾಮ್ರಾಟ ಮೊದಲಾದ ಬಿರುದುಗಳು ಲಭಿಸಿದೆ
Other important aspetcs
Famous Songs
ಬಾ ಇಲ್ಲಿ ಸಂಭವಿಸು ಇಂದಿನ್ನ ಹೃದಯದಲಿ
ತಾಯೆ ನಿನ್ನ ಮಡಿಲಲ್ಲಿ ಕಣ್ಣ ತೆರೆದ ಕ್ಷಣದಲಿ
ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ
ಈ ನೀಲಿ ಬಾನು ಹೂಬಳ್ಳಿ ಕಾನು ಕಾಣಿಲಾಗದಂಥಾ ಕಣ್ಣಿದ್ದು ಏನು?
ಹೊಸ ವರುಷ ಬಂದಂತೆ ಯಾರು ಬಂದಾರು?
ಗಾಲಿ ಉರುಳಿದಂತೆ ಕಾಡಿನ ಗಾಳಿ ಹೊರಳಿದಂತೆ
ಬಾ ಸಖಿ ಬೃಂದಾವನಕೆ ಆನಂದನಿಕೇತನಕೆ
ನಿನ್ನ ಬಾಂದಳದಂತೆ ನನ್ನ ಮನವಿರಲಿ
ಸುತ್ತಮುತ್ತ ಅಂಧಕಾರ ಮಳೆಹನಿಗಳ ಪಂಜರ
ಊದಿ ಬಿಡು ನೀ ಪಾಂಚಜನ್ಯವ ಮಾರ್ದನಿಸಲದು ಮನ್ಮನ
ದೇವರ ಪೆಪ್ಪರಮೆಂಟೇನಮ್ಮ ಗಗನದೊಳು ಅಲೆಯುವ ಚಂದಿರನು
Note: Content mentioned here is subject and limited to availability and our reach. This is not an exhaustive biographical representation of the artiste mentioned here.

