
ದೊಡ್ಡರಂಗೇಗೌಡ
Email:
NA
Mobile:
NA
Profession
ಪ್ರಾಧ್ಯಾಪಕರು, ಸಾಹಿತಿಗಳು, ಚಲನಚಿತ್ರ ಗೀತರಚನಕಾರರು, ರಾಜಕಾರಣಿ
Main Works
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 80ಕ್ಕೂ ಹೆಚ್ಚು ಕೃತಿರಚನೆ ಮಾಡಿದ್ದಾರೆ. 47ಕ್ಕೂ ಅಧಿಕ ಪ್ರಗಾಥ(ode)ಗಳನ್ನು ರಚಿಸಿದ್ದು “ಕನ್ನಡ ಪ್ರಗಾಥಗಳ ಸಾಮ್ರಾಟ್” ಎನಿಸಿದ್ದಾರೆ.
ಪ್ರಗಾಥ ಕೃತಿಗಳು: ಪ್ರೀತಿ ಪ್ರಗಾಥ, ಹಳ್ಳಿ ಹುಡುಗಿ ಹಾಡು-ಪಾಡು
ಕವನ ಸಂಕಲನಗಳು: ಕಣ್ಣು ನಾಲಿಗೆ ಕಡಲು ಕಾವ್ಯ, ಜಗುಲಿ ಹತ್ತಿ ಇಳಿದು, ನಾಡಾಡಿ, ಮೌನ ಸ್ಪಂದನ, ಕುದಿಯುವ ಕುಲುಮೆ, ಚದುರಂಗದ ಕುದುರೆಗಳು, ಯುಗವಾಣಿ, ಬದುಕು ತೋರಿದ ಬೆಳಕು, ಏಳು ಬೀಳಿನ ಹಾಡಿ, ಅವತಾರ ಐಸಿರಿ, ಹೊಸ ಹೊನಲು, ಲೋಕಾಯಣ, ನಿಕ್ಷೇಪ, ಗೆಯ್ಮೆ.
ಭಾವಗೀತೆಗಳು: ಮಾವು-ಬೇವು, ಪ್ರೇಮ ಪಯಣ, ಕಾವ್ಯ-ಕಾವೇರಿ, ನಲ್ಮೆ ನೇಸರ, ಅಂತರಂಗದ ಹೂ ಬನ
ಮುಕ್ತಕಗಳು: ಮಣ್ಣಿನ ಮಾತುಗಳು, ಮಿಂಚಿನ ಗೊಂಚಲು
ಗದ್ಯಕೃತಿಗಳು: ವರ್ತಮಾನದ ವ್ಯಂಗ್ಯದಲ್ಲಿ, ವಿಚಾರ ವಾಹಿನಿ, ವಿಶ್ವಮುಖಿ, ದಾರಿದೀಪಗಳು
ಪ್ರವಾಸ ಸಾಹಿತ್ಯ: ಅನನ್ಯ ಅಮೆರಿಕ, ಪಿರಮಿಡ್ಡುಗಳ ಪರಿಸರದಲ್ಲಿ
ಚಲನಚಿತ್ರ ಕ್ಷೇತ್ರ: ಅಭಿನಯ, ನಿರ್ದೇಶನ, ಸಂಭಾಷಣೆ ರಚಿಸಿದ್ದು, ಸುಮಾರು 600 ಕ್ಕೂ ಹೆಚ್ಚು ಚಲನಚಿತ್ರಗೀತೆಗಳನ್ನು ಬರೆದಿದ್ದಾರೆ.
ಸುಮಾರು 100ಕ್ಕೂ ಹೆಚ್ಚು ಕಿರುತೆರೆ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ.
50 ಭಾವಗೀತೆ ಕ್ಯಾಸೆಟ್ಸ್ ಹೊರತಂದಿದ್ದಾರೆ.
Recognition and Accoldaes
ಭಾರತದ ಉನ್ನತ ನಾಗರಿಕ “ಪದ್ಮಶ್ರೀ” ಪ್ರಶಸ್ತಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಣ್ಣು ನಾಲಿಗೆ ಕಡಲು ಕಾವ್ಯ ಕೃತಿಗೆ)
ಕನ್ನಡ ಸಾಹಿತ್ಯ ಪರಿಷತ್ತಿನಿಂದ ರತ್ನಾಕರವರ್ಣಿ-ಮುದ್ದಣ ಕಾವ್ಯ ಪ್ರಶಸ್ತಿ
2023ರಲ್ಲಿ ಹಾವೇರಿಯಲ್ಲಿ ಜರುಗಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ
Other important aspetcs
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ(2008-2014). ನಾಡಿನ ಗಣ್ಯರು, ಸಾಹಿತಿಗಳು, ರಾಜಕಾರಣಿಗಳು, ವಿಮರ್ಶಕರು, ಸಂಗೀತ ಸಂಯೋಜಕರು, ನಿರ್ದೇಶಕರು, ಅಭಿಮಾನಿಗಳು, ವಿದ್ಯಾರ್ಥಿಗಳು ಈವರೆಗೆ 1. ಸೃಜನ ಸಂಪನ್ನ 2. ಸಮಾಜ ಮುಖಿ 3. ಸಾಹಿತ್ಯ ಸಂಪದ – ಎಂಬ 3 ವೈಚಾರಿಕ ಸಂಭವನಾ ಗ್ರಂಥಗಳನ್ನುಇವರಿಗೆ ಅರ್ಪಿಸಿದ್ದಾರೆ.
Famous Songs
Note: Content mentioned here is subject and limited to availability and our reach. This is not an exhaustive biographical representation of the artiste mentioned here.

