
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
Email:
NA
Mobile:
NA
Profession
ಕಥೆ, ಕವನ, ವಿಮರ್ಶೆ, ಅನುವಾದ, ಜನಪದ
Main Works
ಕವನ ಸಂಕಲನ: ಕೃಷ್ಣಾಕುಮಾರಿ, ಗರಿ, ಮೂರ್ತಿ ಮತ್ತು ಕಾಮಕಸ್ತೂರಿ, ಸಖೀಗೀತ, ಉಯ್ಯಾಲೆ, ನಾದಲೀಲೆ, ಮೇಘದೂತ, ಹಾಡುಪಾಡು, ಗಂಗಾವತರಣ, ಸೂರ್ಯಪಾನ, ಹೃದಯಸಮುದ್ರ, ಮುಕ್ತಕಂಠ, ಚೈತ್ಯಾಲಯ, ಜೀವಲಹರಿ, ಅರಳು ಮರಳು, ನಮನ, ಸಂಚಯ, ಉತ್ತರಾಯಣ, ಮುಗಿಲಮಲ್ಲಿಗೆ, ಯಕ್ಷ ಯಕ್ಷಿ, ನಾಕುತಂತಿ, ಮರ್ಯಾದೆ, ಶ್ರೀಮಾತಾ, ಬಾ ಹತ್ತರ, ಇದು ನಭೋವಾಣಿ, ವಿನಯ, ಮತ್ತೆ ಶ್ರಾವಣಾ ಬಂತು, ಒಲವೇ ನಮ್ಮ ಬದುಕು, ಚತುರೋಕ್ತಿ ಮತ್ತು ಇತರ ಕವಿತೆಗಳು, ಪರಾಕಿ, ಕಾವ್ಯವೈಖರಿ, ತಾ ಲೆಕ್ಕಣಕಿ ತಾ ದೌತಿ, ಬಾಲಬೋಧೆ, ಚೈತನ್ಯದ ಪೂಜೆ, ಪ್ರತಿಬಿಂಬಗಳು.
ವಿಮರ್ಶೆ: ಸಾಹಿತ್ಯಸಂಶೋಧನೆ, ವಿಚಾರ ಮಂಜರಿ, ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ, ಮಹಾರಾಷ್ಟ್ರ ಸಾಹಿತ್ಯ, ಕಾವ್ಯೋದ್ಯೋಗ, ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು, ಸಾಹಿತ್ಯದ ವಿರಾಟ್ ಸ್ವರೂಪ, ಕುಮಾರವ್ಯಾಸ ಪುಸ್ತಿಕೆ,
ನಾಟಕ: ಸಾಯೋ ಆಟ, ಉದ್ಧಾರ, ತಿರುಕನ ಪಿಡುಗು, ನಗೆ ಹೊಗೆ, ಹುಚ್ಚಾಟಗಳು, ದೆವ್ವದ ಮನೆ, ಹೊಸ ಸಂಸಾರ
Recognition and Accoldaes
‘ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ
‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
‘ಪದ್ಮಶ್ರೀ’ ಪ್ರಶಸ್ತಿ
ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್
ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ
1943ರಲ್ಲಿ ಶಿವಮೊಗ್ಗದಲ್ಲಿ ನಡೆದ 27ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು
Other important aspetcs
ಧಾರವಾಡದ ಅಜ್ಜ ಎಂದೇ ಕರೆಯಲ್ಪಡುವ ಬೇಂದ್ರೆಯವರು ಕನ್ನಡ ಕಂಡ ಶ್ರೇಷ್ಠ ಕವಿ, ಬೇಂದ್ರೆಯವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ 'ನರಬಲಿ' ಎಂಬ ಕವನವನ್ನು ಬರೆದಿದ್ದರು. ಇದು ಅವರ 'ಗರಿ' ಕವನ ಸಂಕಲನದಲ್ಲಿ ಪ್ರಕಟವಾಗಿತ್ತು. ಇದರಿಂದಾಗಿ ಬ್ರಿಟಿಷ್ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಅಪ್ಪಟ ದೇಶಪ್ರೇಮಿಯಾಗಿದ್ದ ಬೇಂದ್ರೆಯವರು ಚಳುವಳಿಗಳಲ್ಲಿ ಭಾಗವಹಿಸಿ ಸೆರೆಮನೆವಾಸವನ್ನು ಅನುಭವಿಸಿದ್ದರು. ಜಾನಪದ ಧಾಟಿಯ ಇವರ ಅನೇಕ ಕವಿತೆಗಳು ಸುಶ್ರಾವ್ಯವಾದ ಹಾಡಾಗಿದೆ. ಇವರ ಅನೇಕ ಕವನಗಳು ಚಲನಚಿತ್ರ ಗೀತೆಗಳಾಗಿ ಜನಪ್ರಿಯವಾಗಿವೆ.
Famous Songs
Note: Content mentioned here is subject and limited to availability and our reach. This is not an exhaustive biographical representation of the artiste mentioned here.

