
ಹುಕ್ಕೇರಿ ಬಾಳಪ್ಪ
Email:
NA
Mobile:
NA
Profession
ಗಾಯಕರು, ನಾಟಕಕಾರರು ಮತ್ತು ಸಾಹಿತಿಗಳು. ಕೃಷಿ ಇಲಾಖೆಯಲ್ಲಿ ಪ್ರಚಾರಕರಾಗಿ ಕೆಲಸ ಮಾಡಿದ್ದರು.
Main Works
ಹುಕ್ಕೇರಿ ಬಾಳಪ್ಪನವರು ಕರ್ನಾಟಕದ ಉದ್ದಗಲಕ್ಕೂ, ಕರ್ನಾಟಕದ ಹೊರಗೂ ಸಂಚರಿಸಿ ಹಾಡಿದ್ದಾರೆ. ಜಾನಪದ ಗೀತೆಗಳನ್ನಲ್ಲದೇ, ಕನ್ನಡದ ಕವಿಗಳಾದ ದ.ರಾ.ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಕುವೆಂಪು ಮೊದಲಾದವರ ಗಿತೆಗಳನ್ನು ಹಾಡಿದ್ದಾರೆ. ಸ್ವತಃ ತಾವೇ ಗೀತೆ ರಚಿಸಿ, ಸಂಯೋಜಿಸಿ ಹಾಡಿದ್ದಾರೆ. ಕನ್ನಡ, ಮರಾಠಿ ಹಾಗು ಹಿಂದಿ ಭಾಷೆಗಳಲ್ಲಿ ಗಾನಸುಧೆ ಹರಿಸಿದ್ದಾರೆ.
ಪ್ರಮುಖ ಕಾರ್ಯಕ್ರಮಗಳು: 1955ರಲ್ಲಿ ದೆಹಲಿಯಲ್ಲಿ ನಡೆದ ಯುವಜನ ಮೇಳದಲ್ಲಿ ಹಾಗೂ ಜವಾಹರಲಾಲ ನೆಹರೂ ನಿವಾಸದಲ್ಲಿ ನಡೆದ ಕಾರ್ಯಕ್ರಮ, 1959ರಲ್ಲಿ ದೆಹಲಿಯಲ್ಲಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ ಅವರೊಂದಿಗೆ ನಡೆದ ಕಾರ್ಯಕ್ರಮ, 1962ರಲ್ಲಿ ವಿಜಾಪುರದಲ್ಲಿ ನಡೆದ ಇಂದಿರಾ ಗಾಂಧಿಯವರ ತುಲಾಭಾರ ಕಾರ್ಯಕ್ರಮ, 1963ರಲ್ಲಿ ದೆಹಲಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ಅಪೆಕ್ಸ್ ಥೇಟರಿನಲ್ಲಿ ರಾಷ್ಟ್ರಪತಿ ಡಾ. ಝಕೀರ ಹುಸೇನ್ ಜೊತೆ ಕಾರ್ಯಕ್ರಮ, 1975ರಲ್ಲಿ ವಿಜಯನಗರ ಉತ್ಸವ ಹಾಗೂ 1977ರಲ್ಲಿ ದೆಹಲಿಯಲ್ಲಿ ನಡೆದ ಕನ್ನಡ ಮತ್ತು 1978ರಲ್ಲಿ ಗೋವಾ ಕನ್ನಡ ಸಂಘ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
Recognition and Accoldaes
“ಸಾವಿರ ಹಾಡಿನ ಸರದಾರ” ಎಂದೇ ಪ್ರಖ್ಯಾತರು.
ಬಿರುದುಗಳು: ಸಭಾಭೂಷಣ, ವಿನೋದ ರತ್ನ, ಜಾನಪದ ಸಂಗೀತ ರತ್ನ, ಜಾನಪದ ಗಾನ ಗಾರುಡಿಗ, ಮುಂತಾದುವು
ಪ್ರಶಸ್ತಿ ಪುರಸ್ಕಾರಗಳು: 1980ರಲ್ಲಿ ರಾಷ್ಟ್ರಪ್ರಶಸ್ತಿ, 1981ರಲ್ಲಿ ದೆಹಲಿಯ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕೇರಳದ ತಿರುವಾಂಕೂರಿನ ದಕ್ಷಿಣ ಹಿಂದುಸ್ತಾನದ ಸಾಂಸ್ಕೃತಿಕ ಸೊಸೈಟಿ ಪ್ರಶಸ್ತಿ, ಕನ್ನಡ ಜಾನಪದ ಅಕಾಡೆಮಿ ಸನ್ಮಾನ, 1986ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1990-91ಸಾಲಿನ ತುಳಸೀ ಸಮ್ಮಾನ ಪ್ರಶಸ್ತಿ.
Other important aspetcs
ತಮ್ಮ ನಾಟಕಗಳ ಮೂಲಕ ಸ್ವಾತಂತ್ರ್ಯ ಚಳವಳಿಯ ಸಂದೇಶಗಳನ್ನು ಸಾರುತ್ತಿದ್ದ ಹುಕ್ಕೇರಿಯವರನ್ನು ಬ್ರಿಟಿಷ್ ಸರ್ಕಾರ ಬಂಧಿಸಿ 6 ತಿಂಗಳ ಸೆರೆವಾಸದಲ್ಲಿಟ್ಟಿತ್ತು. 1962ರಲ್ಲಿ ಭಾರತ ಚೀನಾ ನಡುವಿನ ಯುದ್ಧದ ಸಮಯದಲ್ಲಿ ತಮಗೆ ಬಹುಮಾನವಾಗಿ ಬಂದಿದ್ದ ಬೆಳ್ಳಿ ಬಂಗಾರದ ಪದಕಗಳನ್ನು ಸೈನಿಕ ನಿಧಿಗೆ ದಾನ ಮಾಡಿದ್ದರು.
Famous Songs
ಬಾರಿಸು ಕನ ್ನಡ ಡಿಂಡಿಮವ
ಯಾತಕವ್ವ ಹುಬ್ಬಳ್ಳಿ ಧಾರವಾಡ
ಮೊದಲು ಮಾನವನಾಗು
ಇನ್ನು ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾಂವ
ತನ್ನ ತಾ ತಿಳಿದ ಮ್ಯಾಲೆ
ಇಲ್ಲೇ ಬಿತ್ತವ್ವ ಮೂಗುತಿ
ಬುತ್ತಿ ತಕ್ಕೊಂಡು ಹೋಗ್ತೀನಿ ಹೊಲಕ್ಕ
ನಾನು ಬಡವಿ ಆತ ಬಡವ
ಪಂಚಮಿ ಹಬ್ಬ ಉಳಿದಾವ ದಿನ ನಾಕ, ಮುಂತಾದುವು
Note: Content mentioned here is subject and limited to availability and our reach. This is not an exhaustive biographical representation of the artiste mentioned here.

