
ವೀರಭದ್ರಪ್ಪ ಚನ್ನಪ್ಪ ಐರಸಂಗ
Email:
NA
Mobile:
NA
Profession
ರೈಲ್ವೇ ಇಲಾಖೆಯಲ್ಲಿ ವೃತ್ತಿ ಹಾಗೂ ಕವಿಗಳು
Main Works
ಕವನ ಸಂಕಲನ: ಸುಪ್ರಭಾತ, ಬರೆದವನು ನಾನಲ್ಲ, ಹನ್ನೊಂದನೆಯ ಅವತಾರ, ಶೃಂಗಾರಕಾವ್ಯ, ಸುಧಾ ಸರಿತ, ನವರಸ, ಉದಯಗೀತ, ಗುಬ್ಬಿಯ ಗೂಡು, ಕಾವ್ಯಾಂಜಲಿ, ಮೋಹಿನಿ ಭಸ್ಮಾಸುರ, ಕರುನಾಡ ಮುತ್ತುಗಳು, ಗೀತಮಂಜರಿ, ಕಾವ್ಯರತ್ನ, ಮಕ್ಕಳ ಹಾಡು, ಕಾವ್ಯ ವಿಲಾಸ, ಶ್ರೀ ಸಿದ್ಧಲಿಂಗೇಶ್ವರ ಕ್ಷೇತ್ರ, ಪಯಣ, ಮೀರಾಬಾಯಿಯ ಕತೆ, ನಲ್ಲೆಯೂರಿಗೆ, ಭಾವಭಾಸ್ಕರ, ಎನ್ನ ಶಾಕುಂತಲದಿ, ದಾಹ, ಸುಂದರಸೃಷ್ಟಿ, ಮಕ್ಕಳಮನೆ, ಕಿನ್ನರ ಜೋಗಿ, ಬಾಳಿನ ಕಣ್ಣು, ಆಶಾಕಿರಣ, ಮನದನ್ನೆ ಬರುತಿಹಳು, ಏನೋ ಹೊಸತು, ಪ್ರೀತಿಯೇ ಪ್ರೀತಿ, ಮುಂತಾದುವು.
ಆಕಾಶವಾಣಿಯ ‘ಭಾವ ಸಂಗಮ’ ಕಾರ್ಯಕ್ರಮಕ್ಕೆ ಇವರ ರಚನೆಯ ಹಾಡುಗಳೇ ಜೀವಾಳವಾಗಿತ್ತು.
Recognition and Accoldaes
ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
ಕಾವ್ಯಸಂತ ಎಂಬ ಬಿರುದಾಂಕಿತರು
2020 – ಇವರ ಸಾಹಿತ್ಯಿಕ ಸಾಧನೆಗಳ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ
Other important aspetcs
ಸಾವಿರಾರು ಆಶುಕವಿತೆಗಳನ್ನು ಬರೆದಿದ್ದು, ಅವುಗಳನ್ನು ಪುಟ್ಟ ಪ್ಯಾಕೆಟ್ ಪುಸ್ತಕ ರೂಪದಲ್ಲಿ ಮುದ್ರಿಸಿ, ತ ಮ್ಮ ಅಟ್ಲಾಸ್ ಸೈಕಲ್ಲಿನಲ್ಲಿ ಹೆಗಲ ಮೇಲೊಂದು ಜೋಳಿಗೆಯಲ್ಲಿ ಹೊತ್ತು, ತಾವೇ ಮಾರುತ್ತಿದ್ದರು. ತಬಲಾ ವಾದಕರು. ಕೊಳಲನ್ನೂ ನುಡಿಸುತ್ತಿದ್ದರು. ಈಜುಪಟು, ಮಲ್ಲಕಂಬ ಪಟುವೂ ಆಗಿದ್ದರು. ಸ್ವತಃ ಹಾಡುಗಾರರಾಗಿದ್ದು ತಮ್ಮ ಆಶುಕವಿತೆಗಳನ್ನು ತಾವೇ ರಾಗಹಾಕಿ ಹಾಡುತ್ತಿದ್ದರು. ಬಾನುಲಿದ ಕವಿ, ಸೈಕಲ್ ಕವಿ, ಐರಸಂಗ ಕಾಕಾ ಎಂದೇ ಪ್ರಸಿದ್ಧರು.
Famous Songs
ದೇಶಪ್ರೇಮವೇ ರಾಷ್ತ್ರದ ಜೀವವು
ಜಯಜಯತು ಜಯದೇವಿ ಭಾರತಾಂಬೆ
ತಾಯಿ ತುಂಗಭದ್ರೆ ಕನ್ನಡದ ನಾಡ ವರವು ನೀ
ಬಂತಿದೋ ಬಂತಿದೋ ವಸಂತ ಋತು ಹೊಸ ಸಂತಸವೆಲ್ಲರ ಸೂಸುತಿದೆ
ಈ ಬಾಳ ನದಿಗೆ ನಾವೆರೆಡು ತೀರ
ಮರೆಯಬಹುದೇ ಸವಿಯ ನೆನಹನು ತೊರೆಯಬಹುದೇ ಸ್ನೇಹವಾ
ಗೀತವೆನ್ನ ಜೀವನಾ ಪ್ರೀತಿಯೆನ್ನ ಭಾವನಾ
ಬರೆವೆನೊಂದು ಹೃದಯ ಬೆಂದು ಹೊರಗೆ ಬಂದ ಕವನವ
ಎಲ್ಲಾ ತಿಳಿದು ನೋಡಿದಲ್ಲಿ ಬದುಕು ಒಂದು ಮಾಯೆ
ಕರಿನಾಯಿ ಗುಣ ಕೊಳಕಾ – ಭಜನಾ ಪದ
ಶ್ರಾವಣದಾ ಮಳೆ ಸುರಿದಿದೆಯಾದರೂ ಮನದಲಿ ಹಿಂಗದ ದಾಹ
Note: Content mentioned here is subject and limited to availability and our reach. This is not an exhaustive biographical representation of the artiste mentioned here.

